ಮೈಸೂರು

ಹುಣಸೂರು ತಾಲ್ಲೂಕು ಮಡಿವಾಳರ ಸಂಘದ ದಿನದರ್ಶಿಕೆ ಬಿಡುಗಡೆ

ಹುಣಸೂರು ತಾಲ್ಲೂಕು ಮಡಿವಾಳರ ಸಂಘದಿಂದ 2017ರ ದಿನದರ್ಶಿಕೆಯನ್ನು ಗುರುವಾರ ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಶಿವಸ್ವಾಮಿ ಮಾತನಾಡಿ, ಮಡಿವಾಳರ ಸಮಾಜವು ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬಹಳ ಹಿಂದುಳಿದಿದ್ದು ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು.

ವೈಚಾರಿಕ ಭಿನ್ನತೆಯಿಂದ ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿ ಸಮಾಜಿಕ ಹೋರಾಟಗಳಲ್ಲಿ ಹಿನ್ನಡೆಯಾಗುತ್ತಿದ್ದು, ಜಾಗೃತ ಸಮಾವೇಶಗಳನ್ನು ಆಯೋಜಿಸುವ ಮೂಲಕ ಏಕತೆ ಸಾರಬೇಕು. ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಚಿಕ್ಕಣ್ಣ ಕಿರಿಜಾಜಿ, ಗ್ರಾಮ ಪಂಚಾಯತಿ ಸದಸ್ಯರಾದ ವಿಶಾಲಾಕ್ಷಿ, ಗೀತಾಕುಮಾರ್, ಅಧ್ಯಕ್ಷ ರವಿ ಚಿಲ್ಕುಂದ, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಹಳೇಬೀಡು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Leave a Reply

comments

Related Articles

error: