ಮೈಸೂರು

ಸ್ವಚ್ಛತಾ ನಗರಿ ಹ್ಯಾಟ್ರಿಕ್ ಪಟ್ಟಕ್ಕೆ ಸಹಕರಿಸುವಂತೆ ಸಾರ್ವಜನಿಕರಿಗೆ ಪೌರಕಾರ್ಮಿಕರ ಮನವಿ

ಸಾಂಸ್ಕೃತಿಕ ನಗರಿ ಮೈಸೂರು, ಸ್ವಚ್ಛತಾ ಆಂದೋಲನದಲ್ಲಿ ದೇಶದಲ್ಲಿಯೇ ಸುಂದರ ನಗರ ಹಾಗೂ ಸ್ವಚ್ಛ ನಗರವಾಗಿದ್ದು, ಮೂರನೇ ಬಾರಿಯೂ ನಂ.1 ಸ್ಥಾನ ಉಳಿಸಿಕೊಳ್ಳಲು ಸಾರ್ವಜನಿಕರು ಕೈಜೋಡಿಸಬೇಕೆಂದು ಮೈಸೂರು ನಗರಪಾಲಿಕೆ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಜಂಟಿ ಕಾರ್ಯದರ್ಶಿ ಎಂ.ಕೆ. ಮಹದೇವ ಕೋರಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದೇಶದಲ್ಲಿಯೇ ಸ್ವಚ್ಚತಾ ನಗರವಾಗಿ ಮೈಸೂರು ನಂ.1 ಸ್ಥಾನವನ್ನು ಕಳೆದೆರಡು ವರ್ಷಗಳಿಂದಲೂ ಪಡೆದಿದ್ದು ಮೂರನೇ ಬಾರಿ ಹ್ಯಾಟ್ರಿಕ್ ಸಾಧನೆಯಲ್ಲಿದೆ.ಈ ನಿಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಪೌರ ಕಾರ್ಮಿಕರು ಬೆಳಿಗ್ಗೆಯಿಂದ ಸಂಜೆಯವರೆಗೂ ಅವಿರತವಾಗಿ ಶ್ರಮಿಸುತ್ತಿದ್ದು ನಗರದ 65 ವಾರ್ಡ್ಗಳಲ್ಲಿಯೂ ಪ್ರತ್ಯೇಕವಾಗಿ ಕಸ ಹಾಗೂ ತ್ಯಾಜ್ಯ ನಿರ್ವಹಣಾ ಮತ್ತು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಅರಿವಿನ ಕಾರ್ಯಕ್ರಮಗಳನ್ನು ನೀಡಲಾಗಿದೆ.

ಇದರೊಂದಿಗೆ ಮೊಬೈಲ್‍ನಲ್ಲಿ ಸ್ವಚ್ಚತಾ ಆ್ಯಪ್‍ ಅನ್ನು ಡೌನ್ ಲೋಡ್ ಮಾಡಿಕೊಂಡವರು ಸಮಸ್ಯೆಯನ್ನು ತಿಳಿಸಿದಾಕ್ಷಣವೇ ಕಾರ್ಮಿಕರು ಕಾರ್ಯಪ್ರವೃತ್ತರಾಗಿದ್ದಾರೆ. ದೇಶದ 500 ನಗರಗಳಲ್ಲಿ ಮೈಸೂರು ಕೂಡಾ ಸ್ಪರ್ಧೆಯಲ್ಲಿದ್ದು ಮೈಸೂರಿಗೆ ಹ್ಯಾಟ್ರಿಕ್ ಗೆಲ್ಲುವು ಲಭಿಸಲಿ ಎಂದು ಆಶಿಸಿದರು.

ಉಪಾಧ್ಯಕ್ಷರಾದ ಪಳನಿ, ಎಂ.ರಾಜೀವ್ ದೊರೆ, ಸಂಘಟನಾ ಕಾರ್ಯದರ್ಶಿಗಳಾದ ಅರುಣ್‍ಕುಮಾರ್.ಎನ್, ಹರೀಶ್‍ ಆರ್ ಮತ್ತು ರಾಜೀವ್ ಸಿ.ಪಿ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: