ಕರ್ನಾಟಕಪ್ರಮುಖ ಸುದ್ದಿ

ವಿಶ್ವ ಹಾಸ್ಪೈಸ್, ಉಪಶಮನ ಆರೈಕೆ ದಿನಾಚರಣೆ ಪ್ರಯುಕ್ತ ಜಾಥಾಗೆ ಚಾಲನೆ

ಹಾಸನ (ಡಿ.1): ದೀರ್ಘಕಾಲಿಕ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ರೋಗದ ಎಲ್ಲಾ ಹಂತ ಗಳಲ್ಲಿ ನೋವಿನಿಂದ ಹೊರಬರಲು ಉಪಶಮನ ಆರೈಕೆಯು ರೋಗಿಗಳಿಗೆ ತುಂಬ ಅವಶ್ಯಕವಾಗಿ ಬೇಕಾಗಿರುತ್ತದೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಹಾಸ್ಪೈಸ್‍ಗಳ ಅವಶ್ಯಕತೆ ರೋಗಿಗಳಿಗೆ ಇದೆ ಎಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾನ್ಸರ್ ಕೇಂದ್ರದ ಮುಖ್ಯಸ್ಥರಾದ ಡಾ: ರವಿಕಿರಣ್ ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್, ರೋಟರಿ ಸಮುದಾಯದಳ, ವೆಂಕಟೇಶ್ವರ ಪ್ರೌಢ ಶಾಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೆನ್‍ಷನ್ ಮೊಹಲ್ಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರು ಹಾಸನ ನಗರದ ಪೆನ್ ಷನ್ ಮೊಹಲ್ಲದಲ್ಲಿ ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ದಿನಾಚರಣೆ 2018 ರ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಥಾ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಸ್ಥಳೀಯ ಸಂಚಾಲಕರು ಮತ್ತು ಉಪಾಧ್ಯಕ್ಷರಾದ ಡಾ:ಸುಧೀರ್ ಬೆಂಗಳೂರ ಪ್ರಾಸ್ತವಿಕ ನುಡಿಗಳಾಡುತ್ತ ಉಪಶಮನ ಆರೈಕೆಯು ಕ್ಯಾನ್ಸರ್, ಸ್ಟ್ರೋಕ್ ( ಪಾರ್ಶ್ವವಾಯು) ಹೆಚ್.ಐ.ವಿ/ಏಡ್ಸ್, ಮುಂತಾದ ದೀರ್ಘಕಾಲಿಕ ಹಾಗು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ರೋಗದ ಎಲ್ಲಾ ಹಂತಗಳಲ್ಲಿ ನೋವಿನಿಂದ ಹೊರಬರಲು ಹಾಗು ರೋಗದಿಂದ ಆಗುವ ತೊಂದರೆಗಳನ್ನು ತಡೆಯುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಕಾರದೊಂದಿಗೆ “ಉಪಶಮನ ಆರೈಕೆ” ಯೋಜನೆಯನ್ನು ಜುಲೈ 2018 ರಿಂದ ಹಾಸನ ನಗರದಲ್ಲಿ ಪ್ರಾರಂಭಿಸಿದ್ದು ಈ ಯೋಜನೆಯು ಒಬ್ಬರು ವೈದ್ಯರು, ಒಬ್ಬರು ನಸ್ರ್ಸ್, ಒಬ್ಬರು ಆಪ್ತ ಸಮಾಲೋಚಕರು, ಒಬ್ಬರು ಸಾಮಾಜಿಕ ಕಾರ್ಯಕರ್ತರು ಮತ್ತು ಒಬ್ಬರು ಸಂಯೋಜಕರು ಮತ್ತು ಸ್ವಯಂ ಸೇವಕರನ್ನು ಒಳಗೊಂಡ ತಂಡದೊಂದಿಗೆ ರೋಗಿಗಳನ್ನು ಗುರುತಿಸಿ ನಿಸ್ವಾರ್ಥವಾಗಿ ಉಚಿತವಾಗಿ ಸೇವೆಗಳನ್ನು ಒದಗಿಸುತ್ತಿದೆ ಇದರ ಸೌಲಭ್ಯವನ್ನು ರೋಗಿಗಳು ಪಡೆದುಕೊಳ್ಳಬೇಕು ಎಂದರು.

ಜಾಥಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್, ಅಧ್ಯಕ್ಷರಾದ ರೋ, ಡಾ: ಬಿ.ಕೆ.ಸೌಮ್ಯ ಮಣಿ, ಮಾತನಾಡುತ್ತ ಪ್ರತಿಯೊಬ್ಬ ಮನುಷ್ಯನಿಗೂ ಸಮಾಜದಲ್ಲಿ ತನ್ನದೇ ಆದ ಗೌರವವಿರುತ್ತದೆ ಮತ್ತು ಗೌರವಯುತವಾಗಿ ಬದುಕಬೇಕು ಎಂಬ ಆಸೆ ಇರುತ್ತದೆ ಆದ್ದರಿಂದ ಯಾವುದೇ ರೋಗ ಇದ್ದರು ರೋಗಿಯನ್ನು ತಾತ್ಸರ ಮಾಡದೇ ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಬೇಕು ಆಗ ಮಾತ್ರ ರೋಗಿಗಳ ಮನಸ್ಸಿನಲ್ಲಿ ಆತ್ಮಸ್ಥೈರ್ಯ ಬರುತ್ತದೆ ಮತ್ತು ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು ಈ ನಿಟ್ಟಿನಲ್ಲಿ ಸಮಾಜದ ಎಲ್ಲರು ರೋಗಿಗಳ ನೆರವಿಗೆ ಬರಬೇಕು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ರೋಗಿಗಳಿಗೆ ನೀಡಬೇಕು ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಇಂದು ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ದಿನಾಚರಣೆ 2018 ರ ಅಂಗವಾಗಿ ಹಾಸನ ನಗರದ ಪೆನ್‍ಷನ್ ಮೊಹಲ್ಲದ ಮುಖ್ಯ ರಸ್ತೆಗಳಲ್ಲಿ ಸುಮಾರು 250 ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರ ಸಹಕಾರದೊಂದಿಗೆ ಜಾಥಾ ಕಾರ್ಯಕ್ರಮ ನಡೆಸಲಾಯಿತು ಈ ಜಾಥಾ ಕಾರ್ಯಕ್ರಮದಲ್ಲಿ ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ಗೆ ಸಂಬಂದಿಸಿದ ಘೋಷ ವಾಕ್ಯದೊಂದಿಗೆ ಭಿತಿಚಿತ್ರದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಈ ಜಾಥಾ ಕಾರ್ಯಕ್ರಮದಲ್ಲಿ ಹಾಸನ ನಗರದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್, ರೋಟರಿ ಸಮುದಾಯ ದಳ, ವೆಂಕಟೇಶ್ವರ ಪ್ರೌಢ ಶಾಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೆನ್‍ಷನ್ ಮೊಹಲ್ಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಹಿಮ್ಸ್ ಕ್ಯಾನ್ಸರ್ ಕೇಂದ್ರದ ಡಾ: ಸಿ.ಎನ್. ಜಗದೀಶ್ ಮತ್ತು ವೆಂಕಟೇಶ್ವರ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಭಾನುಮತಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: