ಕರ್ನಾಟಕಪ್ರಮುಖ ಸುದ್ದಿ

ಹಾಸನ: ರಸ್ತೆ ಮೇಲ್ದರ್ಜೆ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನಾ ಸಮಾರಂಭ

ಹಾಸನ (ಡಿ.1): ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ರೂ.1865 ಕೋಟಿಗಳ ಶಂಕುಸ್ಥಾಪನಾ ಸಮಾರಂಭವನ್ನು ಡಿ. 1 ರಂದು ಮದ್ಯಾಹ್ನ 2 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್‍ನಿಲ್ದಾಣದ ಬಳಿ ಏರ್ಪಡಿಸಲಾಗಿದೆ.

(ಬಾಣಾವರ-ಹುಳಿಯಾರ್ ಸೆಕ್ಷನ್‍ನ ರಾಹೆ-234ರ ದ್ವಿಪಥ+ಪೇವ್ಡ್ ಶೋಲ್ಡರ್‍ಗೆ ಅಗಲೀಕರಣ, ಬೇಲೂರು-ಬಿಳಿಕೆರೆ ಸೆಕ್ಷನ್‍ನ ರಾಹೆ-373ತ ದ್ವಿಪಥ+ಪೇವ್ಡ್ ಶೋಲ್ಡರ್‍ಗೆ ಅಗಲೀಕರಣ (3 ಪ್ಯಾಕೇಜ್‍ಗಳು), ಚನ್ನರಾಯಪಟ್ಟಣ ಬೈಪಾಸ್‍ನ ಹಾಗೂ ಹಾಸನ ಬೈಪಾಸ್‍ನ ರಾಹೆ-75ರಲ್ಲಿ ದ್ವಿಪಥದಿಂದ ಚತುಷ್ಪಥಕ್ಕೆ ಅಗಲೀಕರಣ) ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ.

ಕೇಂಧ್ರ ರಸ್ತೆ ಸಾರಿಗೆ ಹೆದ್ದಾರಿಗಳು ಮತ್ತು ಜಲಸಾರಿಗೆ, ಜಲಸಂಪನ್ಮೂಲಗಳು, ನದಿಗಳ ಅಭಿವೃದ್ಧಿ ಹಾಗೂ ಗಂಗಾ ಜೀರ್ಣೋದ್ಧಾರ, ಸಚಿವರಾದ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ, ಸಣ್ಣ ನೀರಾವರಿ ಸಚಿವರಾದ ಸಿ.ಎಸ್. ಪುಟ್ಟರಾಜು, ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್, ಲೋಕಸಭಾ ಸದಸ್ಯರುಗಳಾದ ಎಲ್.ಆರ್. ಶಿವರಾಮೇಗೌಡ, ಎಸ್.ಪಿ. ಮುದ್ದಹನುಮೇಗೌಡ, ಪ್ರತಾಪ್ ಸಿಂಹ, ವಿಧಾನಸಭಾ ಸದಸ್ಯರಾದ ಪ್ರೀತಂ ಜೆ. ಗೌಡ, ಕೆ.ಎಸ್. ಲಿಂಗೇಶ್, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಸುರೇಶ್ ಗೌಡ, ಜೆ.ಸಿ.ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಟಿ.ಶ್ರೀಕಂಠೇಗೌಡ, ಎಂ.ಎ. ಗೋಪಾಲಸ್ವಾಮಿ, ಮರಿತಿಬ್ಬೇಗೌಡ, ಡಾ.ವೈ.ಎ. ನಾರಾಯಣಸ್ವಾಮಿ, ಆರ್.ಧರ್ಮಸೇನ, ಕಾಂತರಾಜು, ಆರ್. ಚೌಡರೆಡ್ಡಿ ತೂಪಲ್ಲಿ, ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಎನ್.ಬಿ)

Leave a Reply

comments

Related Articles

error: