ಮೈಸೂರು

ಮೃಗಾಲಯದಲ್ಲಿ ಮತ್ತೊಂದು ಪಕ್ಷಿ ಸಾವು

ಮೈಸೂರಿನ ಮೃಗಾಲಯದಲ್ಲಿ  ಹೆಚ್5ಎನ್8 ವೈರಸ್ ಪತ್ತೆ ಹಿನ್ನೆಲೆಯಲ್ಲಿ ಎಷ್ಟೇ ಜಾಗೃತೆ ವಹಿಸುತ್ತಿದ್ದರೂ ಪಕ್ಷಿಗಳು ಮಾತ್ರ ಪದೇ ಪದೇ ಮರಣವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಗುರುವಾರ ಮೃಗಾಲಯದಲ್ಲಿ ಸ್ಪಾಟ್ ಬಿಲ್ಡ್ ಪೆಲಿಕಾನ್ ಜಾತಿ ಹೆಸರಿನ ಪಕ್ಷಿಯೊಂದು ಮೃತಪಟ್ಟಿದ್ದು, ಮೃತ ಪಕ್ಷಿಯ  ಮಾದರಿಯನ್ನು ಲ್ಯಾಬ್ ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.  ಮೃಗಾಲಯದ ಆಡಳಿತ ವರ್ಗ ಈಗಾಗಲೇ ಮೃಗಾಲಯಕ್ಕೆ ರಜೆ ಘೋಷಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ವಲಸೆ ಹಕ್ಕಿಯೊಂದು ಮೃತಪಟ್ಟಿರುವುದು ಮೃಗಾಲಯದ ಅಧಿಕಾರಿಗಳಿಗೆ ತಲೇನೋವಾಗಿ ಪರಿಣಮಿಸಿದೆ. ಪಕ್ಷಿ ಮೃತ ಪಟ್ಟಿರುವ ಮಾಹಿತಿಯನ್ನು ಮೃಗಾಲಯ ಮೂಲಗಳು ಸಿಟಿಟುಡೆಗೆ ಖಚಿತ ಪಡಿಸಿವೆ.

Leave a Reply

comments

Related Articles

error: