
ಪ್ರಮುಖ ಸುದ್ದಿ
ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ರೈಲ್ವೆ ಸಚಿವರು : ವಾವ್ಹ್ ಹೇಳಿಸತ್ತೆ ಕೇಕ್ ವಿನ್ಯಾಸ
ದೇಶ(ನವದೆಹಲಿ)ಡಿ.1:- ಪ್ರಧಾನಿ ನರೇಂದ್ರ ಮೋದಿಯ ಸಚಿವ ಸಂಪುಟದಲ್ಲಿ ರೈಲ್ವೆ ಸಚಿವರಾಗಿರುವ ಪೀಯೂಷ್ ಗೋಯಲ್ ಇಂದು ತಮ್ಮ 27ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಶುಭ ಸಂದರ್ಭವನ್ನು ರೈಲ್ವೆ ಆಕಾರದಲ್ಲಿರುವ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ತಾನು ಪತ್ನಿಯೊಂದಿಗಿರುವ ಫೋಟೋ ಶೇರ್ ಜೊತೆ ಕೇಕ್ ಫೋಟೋವನ್ನು ಶೇರ್ ಮಾಡಿದ್ದು, ನನ್ನ ಜೊತೆ ಜೊತೆಗೆ ಹೆಜ್ಜೆ ಹಾಕಿದ ಪತ್ನಿಗೆ ಕೇವಲ ಧನ್ಯವಾದ ಹೇಳಿದರೆ ಸಾಲದು ಎಂದು ಬರೆದುಕೊಂಡಿದ್ದಾರೆ. ಚಾಕಲೇಟ್ ನಿಂದ ರೈಲ್ವೆಯಂತೆ ತಯಾರಿಸಲಾದ ಕೇಕ್ ನಲ್ಲಿ ಒಂದು ಇಂಜಿನ್, ಎರಡು ಡಬ್ಬಿಗಳನ್ನು ಅಳವಡಿಸಲಾಗಿದೆ. ಇದರಿಂದಲೇ ಅವರು ತಮಗೆ ನೀಡಿದ ಕೆಲಸದಲ್ಲಿ ಎಷ್ಟು ತತ್ಪರರಾಗಿದ್ದಾರೆ ಎಂಬುದು ತಿಳಿಯಲಿದೆ. ತಮ್ಮ ಖಾಸಗೀ ಕ್ಷಣಗಳ ಸುಂದರ ಕ್ಷಣಗಳಲ್ಲಿ ಕೂಡ ರೈಲನ್ನು ಒಂದು ಭಾಗವಾಗಿಸಿಕೊಂಡಿದ್ದಾರೆ. (ಎಸ್.ಎಚ್)