
ಮೈಸೂರು
ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಸಂಸದ ಧೃವನಾರಾಯಣ್ ಸೂಚನೆ
ಮೈಸೂರು,ಡಿ.1:- ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ ಸಂಸದ ಧೃವನಾರಾಯಣ್ ನೇತೃತ್ವದಲ್ಲಿ ನಡೆಯಿತು.
ಫಸಲು ಹಾನಿಗೊಳಗಾದ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕು. ಹಣ ತಲುಪಬೇಕಾದವರಿಗೆ ಬೇಗ ತಲುಪಿಸಿ. ಎಲ್ಲಾ ಕಡೆ ಆನೆ ತಡೆಗೋಡೆ ಅವಶ್ಯಕವಲ್ಲ. ಬೇಕಾದ ಕಡೆ ಆನೆ ತಡೆಗೋಡೆ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸಂಸದ ಧೃವನಾರಾಯಣ್ ಸೂಚನೆ ನೀಡಿದರು.
ಮಂಗಗಳ ಹಾವಳಿಯನ್ನು ನಿಯಂತ್ರಿಸಿ. ಹಳ್ಳಿ ಜನರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸಿ ಎಂದರು.
ಭತ್ತ ಮತ್ತು ಜೋಳಕ್ಕೆ ಈಗಾಗಲೇ ಬೆಲೆ ನಿಗದಿ ಮಾಡಲಾಗಿದೆ. ಆದರೆ ಇನ್ನೂ ಖರೀದಿ ಕೇಂದ್ರಗಳನ್ನು ಯಾಕೆ ತೆರೆದಿಲ್ಲ. ಕೂಡಲೆ ಖರೀದಿ ಕೇಂದ್ರಗಳನ್ನು ತೆರೆಯಿರಿ ಎಂದು ಜಿಪಂ ಸಿಇಓ ಅವರಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ನಹೀಮಾ ಸುಲ್ತಾನ ನಜೀರ್ ಅಹ್ಮದ್ ವಿವಿಧ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)