ಪ್ರಮುಖ ಸುದ್ದಿಮೈಸೂರು

ಮಾನವ ಕಳ್ಳ ಸಾಗಣೆ ಕಾಯ್ದೆ ಅನುಷ್ಠಾನಕ್ಕೆ ಲೈಂಗಿಕ ಕಾರ್ಯಕರ್ತರ ವಿರೋಧ

ಕೂಲಂಕುಷ ಪರಾಮರ್ಶೆಗೆ ಒತ್ತಾಯ

ಮೈಸೂರು,ಡಿ.1 : ‘ಮಾನವ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಕಾಯ್ದೆ 2018’ ಅನುಷ್ಠಾನಗೊಳ್ಳಿಸುವುದರಿಂದ  ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತರ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಕೂಡಲೇ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಲಾಯಿತು.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಆಶೋದಯ ಸಂಸ್ಥೆಯಲ್ಲಿ ನಡೆದ  ಆಲ್ ಇಂಡಿಯಾ ನೆಟ್ವರ್ಕ್ ಆಫ್ ಸೆಕ್ಸ್ ಕಾರ್ಮಿಕರ ರಾಷ್ಟ್ರೀಯ ಸಮಾಲೋಚನಾ ಕಾರ್ಯಾಗಾರದಲ್ಲಿ  ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದ ಪ್ರತಿನಿಧಿಗಳು ಭಾಗಿಯಾಗಿ ಈ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ ಈ ಕಾಯ್ದೆ ಅನುಷ್ಠಾನಕ್ಕೂ ಮುನ್ನಾ ಸೂಕ್ತ ರೀತಿಯಲ್ಲಿ ಪರಾಮರ್ಶೆಗೊಳಿಸಬೇಕೆಂದು ಕೋರಲಾಯಿತು.

ಲೈಂಗಿಕ ಕಾರ್ಯಕರ್ತರಿಗೆ ಮಾರಕವಾಗಿರುವ ಈ ಕಾಯ್ದೆ ಅನುಷ್ಠಾನಗೊಳಿಸಿದರೆ ಬದುಕು ದುಸ್ಥರವಾಗಲಿದೆ, ಸಮ್ಮತಿಯಿಂದ ಲೈಂಗಿಕ ವೃತ್ತಿಯನ್ನು ಕೈಗೊಂಡವರ ಮೇಲೆ ಪೊಲೀಸರು ಕಿರುಕುಳ ನೀಡುತ್ತಿದ್ದು, ಈ ಕಾಯ್ದೆಯನ್ನು ಮಾನವ ಕಳ್ಳ ಸಾಗಾಣೆಗೆ ಹೊರತಾಗಿ ಕೇವಲ ಲೈಂಗಿಕ ಕಾರ್ಯಕರ್ತರ ಮೇಲೆ ನಡೆಸುವ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್.ಐ.ವಿ. ತಡೆಗಟ್ಟು ನೀಡುವ ಸಹಾಯಧನವನ್ನು ಸೂಕ್ತ ಸಮಯದಲ್ಲಿ ವಿತರಿಸಲಾಗದೆ, ರೋಗಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂಬ ಕಳವಳ ವ್ಯಕ್ತಪಡಿಸಿದ್ದು, ಈ ಸಂಬಂಧ ಔಷಧೋಪಚಾರ ಹಾಗೂ ಕಂಡೊಮ್ ಗಳನ್ನು ಸೂಕ್ತ ಸಮಯದಲ್ಲಿ ವಿತರಿಸಬೇಕು, ಅಲ್ಲದೇ ಮಾನವ ಕಳ್ಳಸಾಗಣಿಕೆ ಹಾಗೂ ಲೈಂಗಿಕ ಕಾಯ್ದೆ  ಈ ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಪರಾಮರ್ಶಿಸಬೇಕೆಂದು ಭಾಗವಹಿಸಿದ್ದ ಪ್ರತಿನಿಧಿನಿಧಿಗಳು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದರು.

ಗೋಧಾವರಿಯ ಪುಷ್ಪಾ, ಗುಂಟೂರಿನ ಚಂದ್ರಕುಮಾರಿ, ಎಐಎನ್ಎಸ್ ಡಬ್ಯು ಸಂಸ್ಥಾಪಕಿ ಶ್ರೀಲಕ್ಷ್ಮಿ, ತಮಿಳುನಾಡಿನ ಗೀತಾ,ನಗರದ ಪ್ರತಿಮಾ,ಮಾಧ್ಯಮ ಸಲಹೆಗಾರ ಶ್ರೀರಾಂ ಮತ್ತಿತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: