
ಮೈಸೂರು
ಗೊಮ್ಮಟಗಿರಿಯಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನ 69 ನೇ ಮಸ್ತಕಾಭಿಷೇಕ
ಮೈಸೂರು,ಡಿ.2:- ಹುಣಸೂರಿನ ಗೊಮ್ಮಟಗಿರಿಯಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನ 69 ನೇ ಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಾಗಿದ್ದು, ಮಸ್ತಕಾಭಿಷೇಕಕ್ಕೆ ದೇವೇಂದ್ರ ಭಟ್ಟಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಮಸ್ತಕಾಭಿಷೇಕದ ಮಜ್ಜನದಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರ ಮಿಂದೆದ್ದಿದ್ದಾನೆ. ಗೊಮ್ಮೇಶ್ಚರ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆದಿದ್ದು, ಜಲ, ಶ್ರೀಗಂಧ, ಅರಿಶಿನ, ಕ್ಷೀರ, ಕಬ್ಬಿನ ಹಾಲು, ಕೇಸರಿ, ಅಷ್ಠಗಂಧ, ಚಂದನ,ಕುಂಕುಮ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಷ ನೆರವೇರಿಸಲಾಗಿದೆ. 1949 ರಲ್ಲಿ ಮಸ್ತಕಾಭಿಷೇಕ ಆರಂಭವಾಗಿದ್ದು, ಮೊದಲನೇ ಮಸ್ತಕಾಭಿಷೇಕಕ್ಕೆ ಜಯಚಾಮರಾಜ ಒಡೆಯರು ಸಾಕ್ಷಿಯಾಗಿದ್ದರು. ಗೊಮ್ಮಟೇಶ್ಚರ ಮೂರ್ತಿ ಇರುವ ಸ್ಥಳದಲ್ಲಿ ಸುಮಾರು 80 ಮೆಟ್ಟಿಲುಗಳನ್ನು ಜಯಚಾಮರಾಜ ಒಡೆಯರು ನಿರ್ಮಿಸಿದ್ದರು. ಮಸ್ತಕಾಭಿಷೇಕ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಗೈರಾಗಿದ್ದರು. (ಕೆ.ಎಸ್,ಎಸ್.ಎಚ್)