ಮೈಸೂರು

ಏಕರೂಪದ ತೆರಿಗೆ ನೀತಿ ಲಾಭದಾಯಕ

ಏಕರೂಪದ ತೆರಿಗೆ ನೀತಿ ಅತ್ಯಂತ ಲಾಭದಾಯಕವಾಗಿದೆ ಎಂದು ವಾಣಿಜ್ಯ ತೆರಿಗೆ ಆಯುಕ್ತ ಬಿ.ಎನ್. ಗಿರಿಯಣ್ಣನವರ್ ಹೇಳಿದ್ದಾರೆ.

ನಗರದ ಎಂ.ಜಿ. ರಸ್ತೆಯಲ್ಲಿರುವ ರಾಜೇಂದ್ರ ಕಲಾ ಮಂಟಪದಲ್ಲಿ ಟ್ಯಾಕ್ಸ್ ಕನ್ಸಲ್ಟಂಟ್ಸ್ ಅಸೋಸಿಯೇಶನ್ ಆಯೋಜಿಸಿದ್ದ ಸರಕು ಮತ್ತು ಸಾಗಣೆ ತೆರಿಗೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ಜಗತ್ತಿನಲ್ಲಿ 150ಕ್ಕೂ ಅಧಿಕ ದೇಶಗಳು ಜಿಎಸ್ ಟಿ ಅಳವಡಿಸಿಕೊಂಡಿವೆ. ಅದರಲ್ಲಿ ಕೆಲವು ಅಭಿವೃದ್ಧಿಯಾದ ದೇಶಗಳು ಇವೆ, ಅಭಿವೃದ್ಧಿಯಾಗದ ದೇಶಗಳು ಸೇರಿವೆ ಎಂದರು. ಈ ವ್ಯಸ್ಥೆಯಲ್ಲಿ ಪಾರದರ್ಶಕತೆಯಿದ್ದು, ತೆರಿಗೆ ಪಾವತಿದಾರರ ಸಮಸ್ಯೆಗಳು 7 ದಿನದೊಳಗೆ ಬಗೆಹರಿಯದಿದ್ದಲ್ಲಿ ದೂರು ಸಲ್ಲಿಸಬಹುದು. ತೆರಿಗೆ ವಂಚಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾರ್ಟೆಡ್ ಅಕೌಂಟೆಂಟ್ ಸಾಯಿ ಪ್ರಸಾದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: