ಪ್ರಮುಖ ಸುದ್ದಿಮೈಸೂರು

ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಒತ್ತಾಯಿಸಿ ದೆಹಲಿಗೆ ನಿಯೋಗ

ಮೈಸೂರು,ಡಿ.3 : ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಉಳಿವಿಗಾಗಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.

ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರು, ಕಾಯಕ ಸಮಾಜಗಳು, ಅಲ್ಪಸಂಖ್ಯಾತರು ಮತ್ತು ಪ್ರಗತಿಪರರು ಈ ಅಭಿಯಾನದಲ್ಲಿ ಪಾಲ್ಗೊಂಡು ಬಿಜೆಪಿಯ ಜಾತಿವಾದದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತಿದೆ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆ ನಡೆಯಬೇಕು, ಅಲ್ಲದೇ ಮತ ವಿಭಜನೆ ತಪ್ಪಿಸಲು ಮಾಜಿ ಪ್ರಧಾನಿ ದೇವೇಗೌಡ ಮಾರ್ಗದರ್ಶನ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ‘ಗ್ರಾಂಡ್ ಅಲೆಯನ್ಸ್’ ರಚನೆಯಾಗಬೇಕೆಂದು ಆಶಿಸಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರಲ್ಲಿ ಮನವಿ ಮಾಡಲು ನಗರದಿಂದ ನಿಯೋಗವೊಂದು ಡಿ.6ರಂದು ದೆಹಲಿಗೆ ತೆರಳುತ್ತಿದೆ ಎಂದು ತಿಳಿಸಿದರು.

ಮಂದಿರ ನಿರ್ಮಾಣವಾಗಲಿ : ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸ್ವಾಗತಿಸಿದ ಅವರು, ಚುನಾವಣೆ ಎದುರಾದಾಗ ಮಾತ್ರ ಬಿಜೆಪಿಗೆ ರಾಮಮಂದಿರ ನಿರ್ಮಾಣ ನೆನಪಾಗುತ್ತಿದೆ,ಇದೊಂದು ಭಾವನಾತ್ಮಕ ಸೂಕ್ಷ್ಮ ವಿಷಯವಾಗಿದ್ದು ಚುನಾವಣಾ ವಿಷಯವಾಗಿ ಬಿಂಬಿಸಬಾರದೆಂದು ತಿಳಿಸಿದರು.

ಡಾ.ಪ್ರಸನ್ನಕುಮಾರ್, ನಂದೀಶ್ ಜಿ.ಅರಸ್, ಡಾ.ಮಧು, ಬೋರಪ್ಪ ಶೆಟ್ಟಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: