ಮೈಸೂರು

ರಾಜಕಾರಣಿಗಳ ದಿನಚರಿ ಹಾಗೂ ಆರೋಗ್ಯ ಮಾಹಿತಿ ತೆರೆದಿಟ್ಟ ಬಿಜೆಪಿ ನಗರಾಧ್ಯಕ್ಷರು

ಸಹಕಾರ ಹಾಗೂ ಸಕ್ಕರೆ ಸಚಿವ ಮಹದೇವಪ್ರಸಾದರ ಅಂತಿಮ ದರ್ಶನಕ್ಕೆ ಗುಂಡ್ಲುಪೇಟೆಗೆ ಬಿಜೆಪಿ ನಾಯಕರು, ಕಾರ್ಯಕರ್ತರೊಡನೆ ಹೋಗಿ ವಾಪಸಾಗುತ್ತಿದ್ದೆ. ಜೊತೆಯಿದ್ದ ಪಕ್ಷದನಾಯಕರು, “ಮಹದೇವಪ್ರಸಾದರದು ಹೋಗುವ ವಯಸ್ಸಲ್ಲ. ಸಜ್ಜನ ರಾಜಕಾರಣಿ, ಸಹೃದಯಿ.ಆದ್ದರಿಂದಲೇ ನೋವಿಲ್ಲದೆ, ನಿದ್ದೆಯಲ್ಲೇ ಮೃತಪಟ್ಟರೇನೋ!” ಎಂದರು.

ಆ ಮಾತುಗಳು ನನ್ನನ್ನು ಚಿಂತನೆಗೆ ಹಚ್ಚಿದವು. ರಾಜಕಾರಣಿಯಾದರೂ, ನಾನು ವೈದ್ಯನಾಗಿ  ಪ್ರವರ್ಧಮಾನಕ್ಕೆ ಬಂದವನು. ವೈದ್ಯಕೀಯ ಭಾಷೆಯಲ್ಲಿ ಇಂತಹ ಸಾವನ್ನು ಸೈಲೆಂಟ್ಎಮ್ ಐ ಎಂಬುದಾಗಿ ಹೇಳುತ್ತೇವೆ.ಮಯೋಕಾರ್ಡಿಯಲ್ಇನ್ಫಾರ್ಕ್ಷನ್ ಎಂಬ ಈ ಹಂತದಲ್ಲಿ ಹೃದಯಕ್ಕೆರಕ್ತದ ಸರಬರಾಜು ಕಡಿಮೆಯಾಗುತ್ತದೆ.

ಸಕ್ಕರೆ ಖಾಯಿಲೆ ಉಂಟಾದ ಹಲವು ವರ್ಷಗಳ ಬಳಿಕ ನ್ಯೂರೋಪತಿ ಎಂಬ ಸಮಸ್ಯೆ ಉಂಟಾಗುತ್ತದೆ. ಅದು ಹೃದಯ ಸಂಬಂಧಿತ ನರಗಳಿಗೆ ಬಾಧಿಸಿದರೆ, ಹೃದಯಕ್ಕೆ ರಕ್ತದ ಕೊರತೆ ಉಂಟಾಗುತ್ತದೆ. ಹೃದಯಕ್ಕುಂಟಾಗುವ ನೋವೂ ನಮಗೆ ತಿಳಿಯುವುದಿಲ್ಲ. ಅದನ್ನೇ ನೋವಿಲ್ಲದ ಮರಣ ಎನ್ನುತ್ತಾರೆ ಜನ. ಹಲವಾರು ವರ್ಷಗಳ ಕಾಲ ಸಕ್ಕರೆಖಾಯಿಲೆಯನ್ನು ಅನುಭವಿಸಿದ ಜೀವಕ್ಕೆ ಈ ನೋವಿಲ್ಲದ ಮರಣ ಉಡುಗೊರೆಯಾಗಿಬಿಟ್ಟಿತೇ!

ರಾಜಕಾರಣಿಗಳ ಜೀವನ ಎಲ್ಲರ ಜೀವನದಂತಲ್ಲ. ಬೆಳಗ್ಗೆ ಬೇಗ ಎದ್ದು, ಜಾಗಿಂಗ್ಮುಗಿಸಿ, ಚೆನ್ನಾಗಿ ಬೆಳಗಿನ  ಉಪಹಾರ ಮುಗಿಸಿ, ಕೆಲಸಮಾಡಿ, ಮಧ್ಯಾಹ್ನ ಆರೋಗ್ಯಕರ ಊಟಮಾಡಿ, ಸ್ವಲ್ಪವಿಶ್ರಾಂತಿ, ಬಳಿಕ ಸಂಜೆ ಬೇಗ ಮನೆಗೆ ಹೋಗಿ ಕುಟುಂಬದೊಡನೆ ಒಡನಾಟ, ಉಹು! ಇಂತಹ ಯಾವುದೇ ಸುಂದರ ಕ್ಷಣಗಳನ್ನು ಕಳೆಯುವುದರಿಂದ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ವಂಚಿತರಾಗುತ್ತಿದ್ದಾರೆ.ಸಮಾಜ ಸೇವೆಗಾಗಿ ರಾಜಕೀಯಕ್ಕೆ ನಾಯಕರು ಪ್ರವೇಶಿಸುತ್ತಾರೆ.ರಾಜಕಾರಣದ ಮಧ್ಯದಲ್ಲಿ, ತಮ್ಮ ದೇಹ ಕಾರಣವನ್ನು ಗಮನಿಸುವಲ್ಲಿ ಅತ್ಯಂತ ವಿಫಲರಾಗುತ್ತಾರೆ.ಅಷ್ಟೈಶ್ವರ್ಯವನ್ನೂ ಮೀರಿದ್ದು ಆರೋಗ್ಯ. ಆರೋಗ್ಯವೇ ಕೈಕೊಟ್ಟರೆ ಏನು ತಾನೇ ಸಾಧಿಸಲಾದೀತು? ಮನುಷ್ಯರ ಜೀವಿತಾವಧಿ  70-80 ವರ್ಷಎಂದಾದರೆ, ರಾಜಕಾರಣಿಗಳದ್ದು  50-60 ವರ್ಷಗಳಿಗೆ ಕುಸಿಯುತ್ತಿದೆ.

ಇದಕ್ಕೆಲ್ಲ ಪ್ರಮುಖ ಕಾರಣ ಒತ್ತಡ ಹಾಗೂ ಒತ್ತಡವನ್ನು ನಾವು ನಿರ್ವಹಿಸುವರೀತಿ. ರಾಜಕಾರಣಿಗಳ ಆರೋಗ್ಯಕ್ಕೆ ಅತಿದೊಡ್ಡ ಶಾಪವೇ ಒತ್ತಡ. ಹಗಲು-ರಾತ್ರಿ ಎನ್ನದೆ ಕೆಲಸ, ಇದರೊಡನೆ ಕುಡಿತ, ಸಿಗರೇಟ್,ಊಟದಲ್ಲಿ ಏರುಪೇರುಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿ ಬಿಡುತ್ತವೆ. ಇತ್ತೀಚೆಗೆ ಓದಿದ ಪತ್ರಕರ್ತ ಜೋಗಿಯವರ ಪುಸ್ತಕದಲ್ಲಿ ಅವರು ದಿನದ  24 ಗಂಟೆಗಳನ್ನು ಕಿತ್ತಳೆ ಹಣ್ಣುಗಳಿಗೆ ಹೋಲಿಸಿ ಅವುಗಳ ಸದುಪಯೋಗದ ಅನಿವಾರ್ಯತೆಯನ್ನು ಸೊಗಸಾಗಿ ವಿವರಿಸಿದ್ದರು. ನಮ್ಮ ಜೀವನವೆಂಬ ಕಿತ್ತಳೆ ಮರದ ದಿನದ 24 ಗಂಟೆಗಳೆಂಬ ಹಣ್ಣುಗಳಲ್ಲಿ ಒಂದನ್ನಾದರೂ ನಾವು ನಮ್ಮ ಆರೋಗ್ಯಕ್ಕೆ ಮೀಸಲಿಡಬೇಕು ಎಂಬುದು ರಾಜಕಾರಣಿ ಹಾಗೂ ವೈದ್ಯನಾಗಿ ನನ್ನ ಅಭಿಪ್ರಾಯ.

ನಾವು ಜೀವ ವಿಮೆಗಳನ್ನು ಮಾಡಿಸುತ್ತೇವೆ. ಆದರೆ ಅದು ನಮ್ಮ ಜೀವನಾನಂತರ ಬರುವ, ನಮಗೆ ಉಪಯೋಗವಾಗದ ನಿಧಿ. ಆದರೆ, ನಮ್ಮ ರಾಜಕಾರಣಿಗಳು ದಿನಕ್ಕೆ ಕನಿಷ್ಟ ಅರ್ಧ ಅಥವಾ ಒಂದು ಗಂಟೆ ವಾಕಿಂಗ್, ಜಾಗಿಂಗ್ ಅಥವಾ ಇನ್ನಾವುದೇ ವ್ಯಾಯಾಮದಲ್ಲಿ ನಿರತರಾದರೆ ಒತ್ತಡ ನಿರ್ವಹಿಸುವ ಸಾಮರ್ಥ್ಯ ದೇಹ ಹಾಗೂ ಮನಸ್ಸಿಗೆ ಸಾಧ್ಯ. ಈ ಒಂದು ಗಂಟೆಯ ವ್ಯಾಯಾಮವೇ ನಿಜವಾದ ಜೀವವಿಮೆ, ಆರೋಗ್ಯವಿಮೆ. ಇದು ನಮ್ಮ ಆರೋಗ್ಯ ಹಾಗೂ ಜೀವಿತಾವಧಿ ಎರಡನ್ನೂ ಹೆಚ್ಚಿಸುತ್ತದೆ. ಒತ್ತಡ ಪರಿಹಾರಕ್ಕೆಂದೋ, ಕ್ಷಣದ ನೆಮ್ಮದಿಗೆಂದೋ ಸಿಗರೇಟ್, ಕುಡಿತ ಆರಂಭಿಸಿದರೆ ಅದು ನಮ್ಮಿಂದ ದಂಡ ಖಂಡಿತಾ ಕಟ್ಟಿಸಿಕೊಳ್ಳುತ್ತದೆ. ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯಕ್ಕೆ ರಕ್ತವನ್ನು ಪಂಪು ಮಾಡಲು ಒತ್ತಡ ಸಿಗುತ್ತದೆ ಹಾಗೂ ಹೃದಯ ಚೆನ್ನಾಗಿ ಕೆಲಸ ಮಾಡುತ್ತದೆ. ರಾಜಕಾರಣ ನಮಗೆ ಪ್ಲೆಶರ್ನೀಡಬೇಕೇ ಹೊರತು ಪ್ರೆಶರ್ ಅಲ್ಲವಲ್ಲ!  ನಾವು ಆರೋಗ್ಯದಿಂದಿದ್ದರಷ್ಟೇ ಸಮಾಜದ ಆರೋಗ್ಯಕ್ಕೆ ನಮ್ಮಿಂದ ಕೊಡುಗೆ ಸಾಧ್ಯ.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನುಎಲ್ಲೆಡೆಆಚರಿಸಲಾಗುತ್ತದೆ.ಆದರೆಎಷ್ಟುಜನ ರಾಜಕಾರಣಿಗಳು, ಜನರು ಯೋಗವನ್ನು ಪ್ರತಿದಿನದ ಅಭ್ಯಾಸವಾಗಿಸಿಕೊಂಡಿದ್ದಾರೆ? ಖ್ಯಾತಬರಹಗಾರ ಪೌಲೋಕೊಯೆಲೋ ಎಂದಂತೆ ಯಾವುದಾದರೊಂದು ಹವ್ಯಾಸವನ್ನು 21 ದಿನಗಳ ಕಾಲ ನಡೆಸಿದ್ದೇ ಆದರೆ ಅದು ಜೀವನಪರ್ಯಂತ ಮುಂದುವರಿಯುತ್ತದೆ! ಯೋಗ-ವ್ಯಾಯಾಮಗಳು ಹಾಗೆ ನಮ್ಮಲ್ಲಿ ಮೈಗೂಡಬೇಕು. ಪ್ರಧಾನಮಂತ್ರಿ ಮೋದಿಯವರು ದಿನಕ್ಕೆ 18 ಗಂಟೆ ಕಾರ್ಯನಿರ್ವಹಿಸುತ್ತಾರೆ. ದಿನದಲ್ಲಿ 20 ನಿಮಿಷಗಳ ಕಾಲ ನಡೆಸುವ ಪವರ್ ಯೋಗ ಸಂಪೂರ್ಣ ದಿನಕ್ಕೆ ಬೇಕಾದ ಚೈತನ್ಯವನ್ನು ಅವರಿಗೆ ನೀಡುತ್ತದೆ.

ಪಕ್ಷದ ನಗರಾಧ್ಯಕ್ಷನಾದ ಬಳಿಕ ನಾನು ಹಲವು ಒತ್ತಡದ ಸಂದರ್ಭಗಳನ್ನು, ಸಮಯ ಸಿಗುತ್ತಿಲ್ಲ  ಎಂಬ ಕ್ಷಣಗಳನ್ನೂ ಕಂಡಿದ್ದೇನೆ .ಆದರೆ ದಿನದ ಒಂದು ಗಂಟೆಯ ವ್ಯಾಯಾಮ, ಜಾಗಿಂಗ್ ಇಡೀ ದಿನದ ಉಲ್ಲಾಸವನ್ನು ಒದಗಿಸುತ್ತದೆ ಎಂಬುದನ್ನು ನಾನು ಸ್ವತಃ ಅನುಭವಿಸಿದ್ದೇನೆ. ಪಕ್ಷಾತೀತವಾಗಿ ರಾಜಕಾರಣಿಗಳು ತಮಗೆ ಅನುಕೂಲವಾದಂತೆ ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್ ನಡೆಸಿದರೆ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ. ರಾಜಕಾರಣಿಗಳಿಗೆ ಆರೋಗ್ಯ ಪರಿಶೀಲನೆಗೆ ಸಾಕಷ್ಟು ಆಧುನಿಕ ಸೌಲಭ್ಯಗಳು, ಅವಕಾಶಗಳಿವೆ. ಅವುಗಳನ್ನು ಉಪಯೋಗಿಸಬೇಕು. ಜನತೆ ರಾಜಕಾರಣಿಗಳೆಂದರೆ ಮುಖಗಂಟಿಕ್ಕಿದ, ದೊಡ್ಡಹೊಟ್ಟೆಯ, ಉಲ್ಲಾಸವಿಲ್ಲದ ವ್ಯಕ್ತಿಗಳೆಂದು ಪರಿಗಣಿಸಿರುವುದೂ ಸುಳ್ಳಾಗಿ, ಸ್ಲಿಮ್ಆಂಡ್ಟ್ರಿಮ್, ನಿಜಕ್ಕೂ ಮಾದರಿ ವ್ಯಕ್ತಿತ್ವದವರು ನಾವಾಗಲು ಸಾಧ್ಯ.

ಕೆಲವುದಿನಗಳಹಿಂದೆಒಂದುಲೇಖನವನ್ನುಓದಿದ್ದೆ.ವಿಪರೀತ ಒತ್ತಡ ಹಾಗೂ ವಿಶ್ರಾಂತಿಯ ಕೊರತೆಯಿಂದ ವೈದ್ಯರ ಸರಾಸರಿ ಆಯಸ್ಸು ಹಿಂದಿಗಿಂತ ಹತ್ತುವರ್ಷ ಕಡಿಮೆಯಾಗಿದೆಯಂತೆ! ವೈದ್ಯ ಹಾಗೂ ರಾಜಕಾರಣಿಯಾಗಿ ಇದನ್ನು ನಾನಂತೂ ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಿ ಆರೋಗ್ಯದೆಡೆಗೆ ಗಮನಹರಿಸಬೇಕಾಗಿದೆ. ಅಷ್ಟಕ್ಕೂ ಸಮಾಜದ ಭಾಗವಾಗಿರುವ ನಮ್ಮ ಆರೋಗ್ಯದ ಸೇವೆ ನಮ್ಮ ಕರ್ತವ್ಯವೇ ತಾನೇ!

dr-manjunath-bh-%e0%b2%a1%e0%b3%86%e0%b2%acಡಾ| ಮಂಜುನಾಥ.ಹೆಚ್.ಬಿ ವೈದ್ಯರು ಹಾಗೂ ಬಿಜೆಪಿ ನಗರಾಧ್ಯಕ್ಷರು

Leave a Reply

comments

Related Articles

error: