ಮೈಸೂರು

ರಾಜ್ಯ ಚುನಾವಣಾ ಆಯೋಗಗಳು ಹೊಸ ತಂತ್ರಜ್ಞಾನದ ಅಳವಡಿಕೆಗೆ ಮುಕ್ತವಾಗಿವೆ : ಚುನಾವಣಾ ಆಯುಕ್ತ ಪರಶುರಾಂ

ಮೈಸೂರು. ಡಿ.4:-  ರಾಜ್ಯ ಚುನಾವಣಾ ಆಯೋಗಗಳು ಹೊಸ ತಂತ್ರಜ್ಞಾನದ ಅಳವಡಿಕೆಗೆ ಮುಕ್ತವಾಗಿವೆ ಎಂದು ಮಧ್ಯಪ್ರದೇಶ್ ಚುನಾವಣಾ ಆಯುಕ್ತ ಪರಶುರಾಂ ಹೇಳಿದರು.

ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿಂದು ದೇಶದ 19 ರಾಜ್ಯಗಳ ರಾಜ್ಯ ಚುನಾವಣಾ ಆಯುಕ್ತರ 27ನೇ ರಾಷ್ಟ್ರಮಟ್ಟದ ಎರಡು ದಿನದ ಸಮ್ಮೇಳನಕ್ಕೆ  ಚಾಲನೆ ನೀಡಿ ಮಾತನಾಡಿದರು.

ಅವರು ಮೈಸೂರಿನಲ್ಲಿ 27 ನೇ ರಾಷ್ಟ್ರೀಯ ಚುನಾವಣಾ ಸಮ್ಮೇಳನ ನಡೆಯುತ್ತಿರುವುದು ಖುಷಿ ತಂದಿದೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಇಂಕ್ ಬಾಟೆಲ್ ಗಳು ರವಾನೆಯಾಗುತ್ತದೆ. ಮೈಸೂರಿನ ಪೇಂಟ್ಸ್ ಮತ್ತು ವಾರ್ನಿಶ್ ನಲ್ಲಿ ಇಂಕ್  ತಯಾರಾಗುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಸಮ್ಮೇಳನದಲ್ಲಿ ಚುನಾವಣಾ ಸುಧಾರಣೆ ಸಂಬಂಧ ಸಾಕಷ್ಟು ವಿಚಾರ ಚರ್ಚೆಯಾಗುತ್ತವೆ. ಮುಂದಿನ ಸಮ್ಮೇಳನದ ಸ್ಥಳದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಆನ್ ಲೈನ್ ವೋಟಿಂಗ್ ಸಿಸ್ಟಮ್ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಚುನಾವಣಾ ಆಯೋಗ ಒತ್ತು ನೀಡುತ್ತಿದೆ. ಪ್ರತೀ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಹಲವು ಹೊಸ ತಂತ್ರಜ್ಞಾನಗಳು ಅನ್ವೇಷಣೆಯಾಗಿದ್ದು, ಅದನ್ನು ಅಳವಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದೇವೆ. ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆನ್ಲೈನ್ ವೋಟಿಂಗ್ ನಡೆದಿದೆ. ನಾಮ ಪತ್ರಗಳ ಸ್ವೀಕಾರ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದಾಗಿ ಅಭ್ಯರ್ಥಿ ಮತ್ತು ಆಯೋಗ ಇಬ್ಬರಿಗೂ ಅನುಕೂಲವಾಗಲಿದೆ. ಚುನಾವಣಾ ಖರ್ಚು, ವೆಚ್ಚಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳುವುದು ಆಯಾ ಸರ್ಕಾರಗಳ ಜವಾಬ್ದಾರಿ. ಕೆಲ ರಾಜ್ಯಗಳಲ್ಲಿ ಸಣ್ಣ ಸಮಸ್ಯೆಯೂ ಇಲ್ಲ. ಆದರೆ ಬಹುತೇಕ ಕಡೆ ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕದಂತಹ ದೊಡ್ಡ ರಾಜ್ಯಗಳಲ್ಲಿ ಮಿಲಿಯನ್‌ಗಟ್ಟಲೆ ಅಭ್ಯರ್ಥಿಗಳಿರುತ್ತಾರೆ. ಮಾದರಿ ನೀತಿ ಸಂಹಿತೆ ಜಾರಿ, ಕಾನೂನು ಪಾಲನೆ ಸೇರಿದಂತೆ ಹಲವು ರೀತಿಯ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಮ್ಮೇಳನದಲ್ಲಿ ರಾಜ್ಯ ಚುನಾವಣಾ ಆಯುಕ್ತರುಗಳ ಜೊತೆಗೆ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್, ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಇಂಡಿಯ ಲಿಮಿಟೆಡ್, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳು ಪಾಲ್ಗೊಂಡಿದ್ದಾರೆ

ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ, ಇವಿಎಂ ಹಾಗೂ ಮಲ್ಟಿಚಾಯಿಸ್ ಇವಿಎಂ ಬಳಕೆ, ಸಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಕಾನೂನಿನ ತೊಡಕುಗಳು, ನೀತಿ ಸಂಹಿತೆ ಅನುಷ್ಠಾನಗೊಳಿಸುವುದು ಹಾಗೂ ಕಾನೂನಿನ ಸುಧಾರಣೆ ಮತ್ತು ಹೊಸ ನಿಯಮಗಳ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: