ಕರ್ನಾಟಕಪ್ರಮುಖ ಸುದ್ದಿ

ಶಾಂತಿ ಸುವ್ಯವಸ್ಥೆಗೆ ಪೊಲೀಸರ ಪಾತ್ರ ಪ್ರಮುಖವಾದದ್ದು: ನ್ಯಾ.ಸಂತೋಷ ಗಜಾನನ

ಹಾಸನ (ಡಿ.4): ಸಮಾಜದ ಶಾಂತಿ ಸುವ್ಯವಸ್ಥೆಗೆ ಪೊಲೀಸರ ಪಾತ್ರ ಪ್ರಮುಖವಾದದ್ದು ಎಂದು 5ನೇ ಹೆಚ್ಚುವರಿ ಜಿಲ್ಲಾ ಸೇಷನ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕವಾ ಯತ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿಯೇ ಕರ್ನಾಟಕದ ಪೊಲಿಸ್ ವ್ಯವಸ್ಥೆ ಅತಿಯಂತ ದಕ್ಷತೆ ಹಾಗೂ ಭವ್ಯವಾದ ಪರಂಪರೆಯನ್ನು ಹೊಂದಿದ್ದು ಹೆಮ್ಮೆಯ ವಿಚಾರ ಎಂದರು.

ನಮ್ಮ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸ್ವಾತಂತ್ರ್ಯಪೂರ್ವದಿಂದಲೂ ಸಹ ಅಸ್ಥಿತ್ವದಲ್ಲಿ ಇತ್ತು. ಸಮಾಜವು ಸರಿಯಾದ ರೀತಿಯಲ್ಲಿ ಇರಬೇಕಾದರೇ ಮತ್ತು ನೆಮ್ಮದಿ ಜೀವನ ವ್ಯವಸ್ಥೆಗೆ ಪೊಲೀಸರ ಅತ್ಯವಶ್ಯಕವಿದೆ ಎಂದರು. 15ನೇ ಶತಮಾನದಿಂದ ಕಾಲಕ್ರಮೇಣ ತಿದ್ದುಪಡಿ ಮೂಲಕ ಮೈಸೂರಿನ ಮಹಾರಾಜರಾದ ಇಮ್ಮಡಿ ಕೃಷ್ಣರಾಜ ಒಡೆಯರು ಅವರ ಕಾಲದಲ್ಲಿ ಪೊಲೀಸ್ ವ್ಯವಸ್ಥೆಗೆ ಒಂದು ಕಾಯಕಲ್ಪ ದೊರಕಿತು. ನಂತರ ಸ್ವತಂತ್ರ್ಯ ಬಂದು, ರಾಜ್ಯವನ್ನು ಪುನರ್ ವಿಂಗಡಣೆಯನ್ನು ಭಾಷಾಧರದ ಮೇಲೆ ಪುನರ್ ವಿಂಗಡಣೆಯಾಯಿತು.

ಇಂತಹ ಭವ್ಯ ಇತಿಹಾಸ ಹೊಂದಿರುವ ವ್ಯವಸ್ಥೆ ಎಂದರೇ ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಎಂದು ಬಣ್ಣಿಸಿದರು. ಇಂತಹ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಒಂದು ಪ್ರಾಧಿನ್ಯವಾದ ಕೆಲಸ. ದಿನದ 24 ಗಂಟೆಗಳ ಕಾಲ ರಾಜ್ಯದ ಜನರನ್ನು ಕಾಯುತ್ತಿದ್ದು, ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ನಿಮ್ಮ ಶ್ರಮವು ಇದೆ ಎಂದು ಹೇಳಿದರು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ ಕಾಪಾಡಿಕೊಂಡರೇ ಮಾತ್ರ ರಾಜ್ಯವನ್ನು ನೀವು ಕಾಪಾಡಲು ಸಾಧ್ಯ. ವ್ಯಾಯಾಮ ತ್ತು ಕ್ರೀಡೆ ಎಂಬುದು ದೈಹಿಕ ಆರೋಗ್ಯಕ್ಕೆ ಉತ್ತಮ ಎಂದು ಸಲಹೆ ನೀಡಿದರು.

ಪ್ಯಾರಾ ಲಿಂಪಿಕ್ ಸ್ವರ್ಣಪದಕ ವಿಜೇತ ಆರ್. ಚೇತನ್ ಮಾತನಾಡಿ, ಪೋಲೀಸ್ ಇಲಾಖೆ ಎಂದರೇ ದಿನದ 24 ಗಂಟೆಯೂ ಪೊಲೀಸ್ ಸೇವೆಯಲ್ಲಿ ತೊಡಗುವ ಇವರು ಕೆಲ ಸಮಯವನ್ನು ಕ್ರೀಡೆಗಾಗಿ ಮೀಸಲಿಸಬೇಕು. ಕ್ರೀಡಾಪಟುವಾದವನಿಗೆ ತಾಳ್ಮೆ, ಗುರಿ ಮುಟ್ಟುವ ಛಲ ಹಾಗೂ ತೆಗೆದುಕೊಳ್ಳುವ ನಿರ್ಧಾರ ಎನ್ನುವ ಮೌಲ್ಯಗಳನ್ನು ಅಳವಡಿಸಿ ಕೊಂಡರೇ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಮುಂಜಾನೆಯ ಸಮಯದಲ್ಲಿ ಕೆಲ ಸಮಯ ಯೋಗ ಮಾಡುವುದರ ಮೂಲಕ ತಮ್ಮ ಮಾನಸಿಕ ಸ್ಥಿತಿ ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು. ಕ್ರೀಡೆ ಎಂದರೇ ಗೆಲುವು ಒಂದೆ ಮುಖ್ಯವಲ್ಲ. ಭಾಗವಹಿಸುವುದು ಮೊದಲ ಆದ್ಯತೆ ಆಗಬೇಕು. ಆತ್ಮ ವಿಶ್ವಾಸದಿಂದ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಸೋಲು-ಗೆಲುವು ಎರಡನ್ನೂ ಒಂದೆ ಸಮವಾಗಿ ಸ್ವೀಕರಿಸುವ ಮೂಲಕ ಪೊಲೀಸ್ ಕ್ರೀಡಾಕೂಟ ಯಶಸ್ವಿಗೊಳಿಸುವಂತೆ ಶುಭ ಹಾರೈಸಿದರು.

ಕ್ರೀಡಾಕೂಟದಲ್ಲಿ ಗೌರವ ರಕ್ಷೆ ಪಡೆದ ನಂತರ ಕ್ರೀಡಾಪಟು ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಕ್ರೀಡಾಜ್ಯೋತಿ ಬರಮಾಡಿಕೊಂಡು ಸ್ವಾಗತಿಸಿದರು. ಕೊನೆಯದಾಗಿ ಕ್ರೀಡಾಪಟುಗಳಿಂದ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ ಸ್ವಾಗತಿಸಿದರು. ಸಮಾಜ ಸೇವಕ ಆರ್.ಕೆ. ಸ್ವರೂಪ್ ನಿರೂಪಿಸಿದರು. (ಎನ್.ಬಿ)

Leave a Reply

comments

Related Articles

error: