ಸುದ್ದಿ ಸಂಕ್ಷಿಪ್ತ

ಡಿ.14-15:- ಕಂಪ್ಯೂಟರ್ ಮತ್ತು ಆಪ್ಟಿಮೈಜೇಷನ್ ಮೂರನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ

ಮೈಸೂರು,ಡಿ.4:- ಜಿ ಎಸ್ ಎಸ್ ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ, ಮೈಸೂರು ಇವರು ವಿದ್ಯುತ್ ವಿದ್ಯುನ್ಮಾನ, ಸಂವಹನ, ಕಂಪ್ಯೂಟರ್ ಮತ್ತು ಆಪ್ಟಿಮೈಜೇಷನ್ ವಿಧಾನಗಳ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು (ಐಸಿಇಇಸಿಸಿಓಟಿ-2018) ಐಇಇಇ ಸಹಯೋಗದೊಂದಿಗೆ ಡಿ. 14 ಮತ್ತು 15 ಡಿಸೆಂಬರ್ 2018 ರಂದು ಆಯೋಜಿಸಿದೆ.

ಮುಖ್ಯ ಅತಿಥಿಗಳಾಗಿ ಡಾ. ಶುಭಲಷ್ಮಿ ಖೆರ್ – ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರು, ವಿದ್ಯುನ್ಮಾನ ವಿಭಾಗ, ಅರ್‍ಕನಾಸ್ ಸ್ಟೇಟ್ ವಿಶ್ವವಿದ್ಯಾಲಯ, ಯುಎಸ್‍ಎ, ಗೌರವಾನ್ವಿತ ಅತಿಥಿಗಳಾಗಿ ಡಾ. ಭಾನು ಪ್ರಕಾಶ್ ಕೆ.ಎನ್ – ಗ್ರೂಪ್ ಲೀಡರ್, ಸಿಗ್ನಲ್ ಮತ್ತು ಇಮೇಜ್ ಪ್ರೊಸೆಸಿಂಗ್ ಗ್ರೂಪ್ (ಸಿಐಪಿ), ಸಿಂಗಾಪುರ್, ಇವರು ಉಪಸ್ಥಿತರಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಎಸ್‍ಎಸ್‍ಎಸ್ (ರಿ) ಅಧ್ಯಕ್ಷ ಜಗನ್ನಾಥ ಶೆಣೈ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಎಸ್‍ಎಸ್‍ಎಸ್ (ರಿ) ಗೌರವ ಕಾರ್ಯದರ್ಶಿಗಳಾದ ವನಜಾ ಬಿ. ಪಂಡಿತ್, ಬಿ ವಿ ಶ್ರೀನಿವಾಸ ಗುಪ್ತ, ಉಪಾಧ್ಯಕ್ಷರು, ಜಿಎಸ್‍ಎಸ್‍ಎಸ್ (ರಿ), ಓ ಪ್ರತಾಪ್ ಕುಮಾರ್ ಜಂಟಿ ಕಾರ್ಯದರ್ಶಿಗಳು ಜಿಎಸ್‍ಎಸ್‍ಎಸ್ (ರಿ), ಇವರ ಸಮ್ಮುಖದಲ್ಲಿ ನಡೆಯಲಿದೆ. ಆರ್. ಕೆ. ಭರತ್ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಗೀತಾ ಶಿಶು ಶಿಕ್ಷಣ ಸಂಘ, ಅನುಪಮ ಬಿ ಪಂಡಿತ್, ಆಡಳಿತಾಧಿಕಾರಿಗಳು, ಜಿ ಎಸ್ ಎಸ್ ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ, ಮೈಸೂರು. ಡಾ. ಎಂ. ಶಿವಕುಮಾರ್, ಪ್ರಾಂಶುಪಾಲರು, ಜಿಎಸ್‍ಎಸ್‍ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ, ಮೈಸೂರು. ಅಂತರಾಷ್ಟ್ರೀಯ ಸಮ್ಮೇಳನದ ಪ್ರಕಟಣಾಕಾರರಾದ ಡಾ. ಪರಮೇಶಾಚಾರಿ ಬಿ ಡಿ ಪ್ರಾಧ್ಯಾಪಕರು ಹಾಗೂ ಟಿಸಿಇ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಡಾ. ರೇಷ್ಮಾ ಭಾನು ಪ್ರಾಧ್ಯಾಪಕರು ಹಾಗೂ ಐಎಸ್‍ಇ ವಿಭಾಗದ ಮುಖ್ಯಸ್ಥರು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಲಿದ್ದಾರೆ. ವಿದ್ಯುತ್, ವಿದ್ಯುನ್ಮಾನ, ಸಂವಹನ, ಕಂಪ್ಯೂಟರ್ ಮತ್ತು ಆಪ್ಟಿಮೈಜೇಷನ್ ವಿಧಾನ ಕುರಿತ ಐಇಇಇ ಅಂತರಾಷ್ಟ್ರೀಯ ಸಮ್ಮೇಳನ (ಐಸಿಇಇಸಿಸಿಓಟಿ-2018) ಕುರಿತ ಈ ಅಂತಾರಾಷ್ಟ್ರೀಯ ಸಮ್ಮೇಳನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿಟಿಯುನ ಅಂಗಸಂಸ್ಥೆ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು,  ಸಹಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಹಾಗೂ ವಿವಿಧ ರಾಜ್ಯಗಳ ಮತ್ತು ದೇಶ ವಿದೇಶದ ಸಂಶೋಧನಾ ವಿಭಾಗದ ಮುಖ್ಯಸ್ಥರನ್ನು ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: