ಪ್ರಮುಖ ಸುದ್ದಿ

ಸಾಲದ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

ರಾಜ್ಯ(ಮಂಡ್ಯ)ಡಿ.4:- ಸಾಲದ ಬಾಧೆ ತಾಳಲಾರದೇ ಕಾಳಿನ ವಿಷದ ಮಾತ್ರೆ ಸೇವಿಸಿ ಪ್ರಗತಿಪರ ರೈತರೋರ್ವರು  ಆತ್ಮಹತ್ಯೆ ಮಾಡಿಕೊಂಡ ಘಟನೆ ಕೃಷ್ಣರಾಜಪೇಟೆ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಕೃಷ್ಣರಾಜಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಸುಬ್ಬೇಗೌಡರ ಪುತ್ರ ಮಹೇಶ್(34)ಎಂದು ಗುರುತಿಸಲಾಗಿದೆ.  ಎರಡು ಎಕರೆ ಕೃಷಿಭೂಮಿಯನ್ನು ಹೊಂದಿರುವ ಮಹೇಶ್ ಮಾಕವಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 1.20ಲಕ್ಷ ರೂ.ಸಾಲ ಸೇರಿದಂತೆ ಕೈಸಾಲ 3ಲಕ್ಷ ಮಾಡಿ ಕೊಳವೆ ಬಾವಿಯನ್ನು ಕೊರೆಸಿ ಕಬ್ಬು ಮತ್ತು ಬಾಳೆಯನ್ನು ಬೆಳೆದಿದ್ದರು. ಎರಡು ಕೊಳವೆ ಬಾವಿಗಳಲ್ಲಿಯೂ ಜಲದ ಮೂಲವು ಭತ್ತಿಹೋಗಿ ನೀರು ನಿಂತು ಹೋಗಿದ್ದಾಗ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ನಿನ್ನೆ ರಾತ್ರಿ ತಮ್ಮ ಮನೆಯಲ್ಲಿಯೇ ವಿಷದ ಮಾತ್ರೆ  ಸೇವಿಸಿ ಅಸ್ವಸ್ಥರಾಗಿ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: