ಪ್ರಮುಖ ಸುದ್ದಿ

ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡಿದರೂ ರೈತರಿಗೆ ಬ್ಯಾಂಕ್ ನೋಟೀಸ್ ಬರೋದು ತಪ್ಪಿಲ್ಲ

ರಾಜ್ಯ(ತುಮಕೂರು),ಡಿ.4:- ರಾಜ್ಯ ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡಿದರೂ ಸಹ ಬ್ಯಾಂಕ್ ನಿಂದ ರೈತರಿಗೆ ನೋಟೀಸ್ ಬರುವುದು ಮಾತ್ರ ತಪ್ಪಿಲ್ಲ. ಡಿಸಿಎಂ.ಡಾ.ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲೇ ಬ್ಯಾಂಕ್ ರೈತರಿಗೆ ನೋಟೀಸ್ ನೀಡಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೀತಾ ಗ್ರಾಮದಲ್ಲಿರುವ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್  ಸಾಲ ಮರುಪಾವತಿ ಮಾಡದ ರೈತರಿಗೆ ನೋಟೀಸ್ ಜಾರಿ ಮಾಡಿದೆ. ದೊಡ್ಡ ಸಾಗ್ಗೆರೆ ಗ್ರಾಮಪಂಚಾಯತ್ ವ್ಯಾಪ್ತಿಯ  ಲಕ್ಷ್ಮಮ್ಮ ಎಂಬವರ ಮೊಮ್ಮಕ್ಕಳಿಗೆ ಸಾಲಮರುಪಾವತಿ ಮಾಡುವಂತೆ ಬ್ಯಾಂಕ್ ನೋಟೀಸ್ ನೀಡಿದೆ.

ಲಕ್ಷ್ಮಮ್ಮ ಕಾವೇರಿ ಕಲ್ಪತರು ಬ್ಯಾಂಕ್ ನಿಂದ 80 ಸಾವಿರ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ನಂತರ ಸಾಲ ಮರುಪಾವತಿ ಮಾಡದ ಹಿನ್ನೆಲೆ ಬ್ಯಾಂಕ್ ನಿಂದ ಟ್ರ್ಯಾಕ್ಟರ್ ಸೀಜ್ ಮಾಡಲಾಗಿತ್ತು. ಇದಾದ ಬಳಿಕ ಲಕ್ಷ್ಮಮ್ಮ ಸಾವನ್ನಪ್ಪಿದರೂ ಇದೀಗ ಅವರ ಮೊಮ್ಮಕ್ಕಳಿಗೆ ಬ್ಯಾಂಕ್ ಸಾಲ ಮರು ಪಾವತಿಸುವಂತೆ ನೋಟೀಸ್ ಜಾರಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ರೈತರಿಗೆ ಬ್ಯಾಂಕ್ ನಿಂದ ನೋಟೀಸ್ ನೀಡದಂತೆ ಡಿಸಿಗಳಿಗೆ ಸೂಚಿಸಿರುವುದಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳುತ್ತಾರೆ. ಹಾಗೆಯೇ ರೈತರಿಗೆ ಬ್ಯಾಂಕ್ ಗಳು ನೋಟೀಸ್ ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಆದರೂ ಬ್ಯಾಂಕ್ ನಿಂದ ರೈತರಿಗೆ ನೋಟೀಸ್ ಬರುತ್ತಲೇ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: