Uncategorized

ರೈಲಿನಡಿಯಲ್ಲಿ ಶವವಾಗಿ ಪತ್ತೆಯಾದ ಕಾರವಾರದ ಯೋಧ

ಕಾರವಾರ,ಡಿ.4- ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ರೈಲಿನಡಿಯಲ್ಲಿ ಯೋಧರೊಬ್ಬರು ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ .

ಕಾರವಾರದ ಮಖೇರಿ ಗ್ರಾಮದ ದಮ್ಮಿಂಗ್‌ ಸಿದ್ದಿ (39) ಶವವಾಗಿ ಪತ್ತೆಯಾಗಿರುವ ಯೋಧ. ದಮ್ಮಿಂಗ್ 15 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಳಿಕ ಹೆಚ್ಚುವರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದರು.

ದಮ್ಮಿಂಗ್‌ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತರುತ್ತಿರುವುದಾಗಿ ಸೇನಾ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ನಾಳೆ ಮಖೇರಿಗೆ ತಲುಪುವ ಸಾಧ್ಯತೆಗಳಿವೆ. ಮಗನ ಹುಟ್ಟು ಹಬ್ಬ ಮತ್ತು ಗೃಹ ಪ್ರವೇಶವನ್ನು ಸಂಭ್ರಮದಿಂದ ಮಾಡುವ ಉತ್ಸಾಹದಲ್ಲಿದ್ದ ಕುಟುಂಬ ಸಾವಿನಿಂದ ಕಣ್ಣೀರ ಕಡಲಲ್ಲಿ ಮುಳುಗಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. (ಎಂ.ಎನ್)

 

Leave a Reply

comments

Related Articles

error: