ಪ್ರಮುಖ ಸುದ್ದಿ

ಪುರಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಶಾಸಕ ಡಾ.ನಾರಾಯಣಗೌಡ

ರಾಜ್ಯ(ಮಂಡ್ಯ)ಡಿ.5:- ಕೃಷ್ಣರಾಜಪೇಟೆ ಪುರಸಭೆ ಚುನಾವಣೆಗೆ ಶಾಸಕ ಡಾ.ನಾರಾಯಣಗೌಡ ರಣಕಹಳೆ ಮೊಳಗಿಸಿದ್ದಾರೆ.

ಕಳೆದ 25 ವರ್ಷಗಳ ಜನವಿರೋಧಿ ಕಾಂಗ್ರೆಸ್ ಆಡಳಿತಕ್ಕೆ ಮಂಗಳ ಹಾಡಿ ಜೆಡಿಎಸ್ ಅಧಿಕಾರಕ್ಕೆ ತರಲು ಶಾಸಕರು ಸಂಕಲ್ಪ ತೊಟ್ಟಿದ್ದು ಪಟ್ಟಣದ ಪುರಾಣ ಪ್ರಸಿದ್ಧ ಭ್ರಮರಾಂಭ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮನೆ ಮನೆಗೆ ಭೇಟಿ ನೀಡಿ ಜನಸಾಮಾನ್ಯರ ಕುಂದುಕೊರತೆಗಳ ನಿವಾರಣೆಗೆ ಮುಂದಾಗಿದ್ದಾರೆ. ಪಟ್ಟಣದ ಕಡುಬಡವರು ಮತ್ತು ಮಧ್ಯಮವರ್ಗದ ಜನರಿಗಾಗಿ 5ಲಕ್ಷರೂ ವೆಚ್ಚದಲ್ಲಿ 1500ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ತಂದಿರುವುದಲ್ಲದೇ ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ 20ಕೋಟಿ ರೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಎಸ್.ರಾಮೇಗೌಡ, ಎಪಿಎಂಸಿ ಮಾಜಿಅಧ್ಯಕ್ಷ ಕೆ.ಎನ್.ಕೃಷ್ಣ, ಕೆ.ಶ್ರೀನಿವಾಸ್, ಪುರಸಭೆ ಸದಸ್ಯರಾದ ಹೇಮಂತ್ ಕುಮಾರ್, ಸಂತೋಷ್ ಕುಮಾರ್, ದಿನೇಶ್, ನಾಗರಾಜು, ಪದ್ಮಾವತಿ, ಲೋಕೇಶ್, ಪುಟ್ಟಸ್ವಾಮಿ, ಶ್ರೀಧರಸಿರಿವಂತ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: