ಕರ್ನಾಟಕಪ್ರಮುಖ ಸುದ್ದಿ

ಪ್ಲಾಸ್ಟಿಕ್ ಬಳಸದಂತೆ ವ್ಯಾಪಾರಿಗಳಿಗೆ ಹಾಸನ ಪೌರಾಯುಕ್ತರ ಎಚ್ಚರಿಕೆ

ಹಾಸನ (ಡಿ.5): ಹಾಸನ ನಗರದ ಸಾರ್ವಜನಿಕರಿಗೆ ಮತ್ತು ಉದ್ದಿಮೆದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಹಾಸನ ನಗರ ವ್ಯಾಪ್ತಿಯಲ್ಲಿ ಹೋಟೆಲ್, ಕ್ಯಾಂಟೀನ್, ಮೆಸ್, ಬೇಕರಿ ಮತ್ತು ಇತರೆ ಆಹಾರ ತಯಾರಿಸುವ ಉದ್ದಿಮೆದಾರರು ಆಹಾರ ತಯಾರಿಸುವ ಸಮಯದಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡು ಬಂದಿರುತ್ತದೆ. (ಇಡ್ಲಿ ತಯಾರಿಸುವ ಟ್ರೈಗಳಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವುದು) ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ಸಂಭವ ಹೆಚ್ಚಾಗಿರುತ್ತದೆ ಈ ಕುರಿತು ನ.22 ರಂದು ನಡೆದ ಸಾರ್ವಜನಿಕ ಜನಾಭಿಪ್ರಾಯ ಸಭೆಯಲ್ಲಿ ನಾಗರೀಕರು ದೂರುಗಳನ್ನು ಸಲ್ಲಿಸಿರುತ್ತಾರೆ.

ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಆಹಾರ ಉತ್ಪಾದಿಸುವ / ತಯಾರಿಸುವ ಘಟಕ ಅಥವಾ ಹೋಟೆಲ್, ಕ್ಯಾಂಟೀನ್, ಮೆಸ್ ಹಾಗೂ ರಸ್ತೆ ಬದಿಯ ಗಾಡಿಗಳಲ್ಲಿ ಆಹಾರ ತಯಾರಿಸುವ ಉದ್ದಿಮೆದಾರರು ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಹಾಳೆ ಹಾಗೂ ಇತರೆ ಪ್ಲಾಸ್ಟಿಕ್‍ಗಳ ಬಳಕೆಯನ್ನು ಮಾಡಬಾರದೆಂದು ಹಾಗೂ ಸರ್ಕಾರದ ಆದೇಶದಂತೆ ಯಾವುದೇ ರೀತಿಯ ಪ್ಲಾಸ್ಟಿಕ್, ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಗ್ರಾಸರಿ ಬ್ಯಾಗ್, ಹಾಗೂ ಇತರೆ ಪ್ಲಾಸ್ಟಿಕ್‍ನಿಂದ ತಯಾರಿಸಿದ ಉತ್ಪನ್ನಗಳ ಬಳಕೆ ಮತ್ತು ಮಾರಾಟ ಮಾಡದಂತೆ ಸೂಚಿಸಲಾಗಿದೆ.

ಮತ್ತು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರ ಆರೋಗ್ಯದ ಹಿತಾ ದೃಷ್ಠಿಯಿಂದ ನಿಮ್ಮ ಉದ್ದಿಮೆಯನ್ನು ಸ್ಥಗಿತಗೊಳಿಸಲಾಗುವುದಲ್ಲದೇ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರಸಭೆಯೊಂದಿಗೆ ಸಹಕರಿಸಲು ನಗರಸಭೆ ಪೌರಾಯುಕ್ತರು ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: