
ಪ್ರಮುಖ ಸುದ್ದಿ
ಬಿಬಿಎಂಪಿಯ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ಸದಸ್ಯ ಭದ್ರೇಗೌಡ ಅವಿರೋಧವಾಗಿ ಆಯ್ಕೆ?
ರಾಜ್ಯ(ಬೆಂಗಳೂರು)ಡಿ.5:- ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿದ್ದ ಬಿಬಿಎಂಪಿಯ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ಸದಸ್ಯ ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ಅವರು ಅಕ್ಟೋಬರ್ 5ರಂದು ನಿಧನರಾಗಿದ್ದರು. ಇವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭದ್ರೇಗೌಡ ಅವರು ಬಿಬಿಎಂಪಿ ನಾಗಾಪುರ ವಾರ್ಡ್ ನ ಜೆಡಿಎಸ್ ಸದಸ್ಯರಾಗಿದ್ದಾರೆ. ಮೊದಲ ಬಾರಿಗೆ ಬಿಬಿಎಂಪಿ ಸದಸ್ಯರಾಗಿದ್ದು ಈ ಹಿಂದೆ ವಾರ್ಡ್ ಕಮಿಟಿ ಅಧ್ಯಕ್ಷರೂ ಆಗಿದ್ದರು. ಉಪಮೇಯರ್ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. (ಕೆ.ಎಸ್,ಎಸ್.ಎಚ್)