ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಹರ್ಷ

ಬೆಂಗಳೂರು,ಡಿ.5-ರಾಜಾಹುಲಿ ಖ್ಯಾತಿಯ ನಟ ಹರ್ಷ ಐಶ್ವರ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಸೋಮವಾರ ತಿರುಪತಿಯಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಇಬ್ಬರು ಸಪ್ತಪದಿ ತುಳಿದಿದ್ದಾರೆ. ಎರಡು ಕುಟುಂಬದವರು ಮತ್ತು ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೂಲತಃ ಚಿಕ್ಕಮಂಗಳೂರಿನವರಾದ ಐಶ್ವರ್ಯ ಮಾಡೆಲ್ ಆಗಿದ್ದಾರೆ.

ತಿರುಪತಿಯಲ್ಲಿ ಮದುವೆ ಇದ್ದ ಕಾರಣ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿ.8 ರಂದು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೇ.28 ರಂದು ಇವರಿಬ್ಬರು ನಿಶ್ಚಿತಾರ್ಥ ನೆರವೇರಿತ್ತು.

ಹರ್ಷ ‘ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ‘ಪವರ್ ಸ್ಟಾರ್’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಹರ್ಷ ನಟಿಸಿದ್ದಾರೆ. ನಾಯಕ ನಟನಾಗಿ ‘ವರ್ಧನ’, ‘ರಘುವೀರ್’, ‘ಗಜಪಡೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: