Uncategorized

ಮಳವಳ್ಳಿ: ರೈತರಿಗಾಗಿ ವಿವಿಧ ಹೈನುಗಾರಿಕೆ ತರಬೇತಿ

ಮಂಡ್ಯ (ಡಿ.5): ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಮಳವಳ್ಳಿ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದ ವತಿಯಿಂದ ಡಿ.17 ರಿಂದ ಡಿ.19 ರವರೆಗೆ ಕೋಳಿ ಸಾಕಾಣಿಕೆ ತರಬೇತಿಯನ್ನು, ಡಿಸೆಂಬರ್ 20 ರಿಂದ ಡಿಸೆಂಬರ್ 22 ರವರೆಗೆ ಹೈನುಗಾರಿಕೆ ತರಬೇತಿಯನ್ನು ಮತ್ತು ಡಿಸೆಂಬರ್ 27 ರಿಂದ 29 ರವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತಿ ಇರುವವರು ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಿಗ್ಗೆ 10.30 ಗಂಟೆಗೆ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ, ಸರ್ಕಾರಿ ಕೋಳಿ ಫಾರಂ ಪಕ್ಕ, ಮೈಸೂರು ರಸ್ತೆ, ಮಳವಳ್ಳಿ ಇಲ್ಲಿ ಹಾಜರಾಗಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08231-244233 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: