ಮೈಸೂರು

ಹೆಚ್.ಎಸ್.ಮಹದೇವಪ್ರಸಾದ್ ಅವರಿಗೆ ಶ್ರದ್ಧಾಂಜಲಿ

ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರು ಚಿಕ್ಕಮಗಳೂರಿನಲ್ಲಿ ನಿಧನರಾಗಿದ್ದು, ಮೃತರ ಗೌರವಾರ್ಥ ಜೆ.ಎಸ್.ಎಸ್.ಮಹಾವಿದ್ಯಾಪೀಠದಲ್ಲಿ ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಲಾಗಿತ್ತು.

ಸುತ್ತೂರು ಶ್ರೀಮಠದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಅವರಿಗೆ ಜೆ.ಎಸ್.ಎಸ್.ಮಹಾವಿದ್ಯಾಪೀಠದ ಎದುರು ಅಖಿಲ ಭಾರತ ವೀರಸೈವ ಮಹಾಸಬಾ, ವೀರಶೈವ ಸಂಘಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದ ವತಿಯಿಂದ ಶ್ರದ್ಧಾಂಜಲಿಯನ್ನುjss-web-2 ಸಲ್ಲಿಸಲಾಯಿತು. ಈ ಸಂದರ್ಭ ಮಹದೇವಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಚಿದಾನಂದ ಸ್ವಾಮೀಜಿ, ದಂಡಿಕೇರಿ ಸ್ವಾಮೀಜಿ, ಚಿಂಚನಹಳ್ಳಿ ಸ್ವಾಮೀಜಿ, ಎಚ್.ಗಂಗಾಧರನ್, ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಿ.ಜಿ.ಬೆಟಸೂರ ಮಠ, ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: