ಮೈಸೂರು

ಇಂಗ್ಲೆಂಡಿಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಭೇಟಿ

ಮೈಸೂರು,ಡಿ.5:- ಇಂಗ್ಲೆಂಡಿಗೆ ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ  ಒಡೆಯರ್ ಭೇಟಿ ನೀಡಿದ್ದಾರೆ.

ಡಾಮೆ ಮಾರ್ಗೇಟ್ ಹೆಲೆನ್ ಗ್ರೇವಿಲ್ಲೆ ಒಡೆತನದಲ್ಲಿರುವ ಭಾರತದ ಮಹಾರಾಜರುಗಳಿಗೆ ಆತಿಥ್ಯ ನೀಡುವ ಇಂಗ್ಲೆಂಡ್ ದೇಶದ ಪ್ರತಿಷ್ಠಿತ ಪೋಲೆಸ್ಡೆನ್ ಎಸ್ಟೇಟ್ ಗೆ ಯದುವೀರ್ ಒಡೆಯರ್ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಯದುವೀರ್ ತಾತ ನಾಲ್ವಡಿ ಕೃಷ್ಣರಾಜ ಒಡೆಯರ್, ಕಂಠೀರವ ನರಸರಾಜ ಒಡೆಯರ್ ಸಹ ಭೇಟಿ ನೀಡಿದ್ದರಂತೆ.

ಭಾರತದ ಹಲವಾರು ಮಹಾರಾಜರುಗಳಿಗೆ ಪೋಲೆಸ್ಡೆನ್ ಎಸ್ಟೇಟ್ ನಲ್ಲಿ ಆತಿಥ್ಯ ನೀಡಲಾಗಿದ್ದು, ಪೋಲೆಸ್ಡೆನ್ ಎಸ್ಟೇಟ್‌ನಲ್ಲಿ ವಿಶೇಷ ಭೋಜನ ನೀಡಿ ಯದುವೀರ್‌ ಅವರಿಗೆ ಗೌರವ ತೋರಲಾಗಿದೆಯಂತೆ. ಮೈಸೂರು ರಾಜಮನೆತನಕ್ಕೆ ಗೌರವ ನೀಡುವ ಸಲುವಾಗಿ ಯದುವೀರ್‌‌ ಅವರಿಗೆ ಆತಿಥ್ಯ ನೀಡಲಾಗಿದ್ದು, ಪೋಲೆಸ್ಡೆನ್ ಆತಿಥ್ಯವನ್ನು ಯದುವೀರ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: