ದೇಶಮನರಂಜನೆ

ಇಂಡಿಯನ್‌-2 ಬಳಿಕ ನಟನೆಗೆ ವಿದಾಯ ಹೇಳಲಿದ್ದಾರಾ ಕಮಲ ಹಾಸನ್‌?

ಚೆನ್ನೈ (ಡಿ.5): ಶಂಕರ್‌ ನಿರ್ದೇಶನದ “ಇಂಡಿಯನ್‌-2′ ಚಿತ್ರ ಮುಗಿದೊಡನೆ ದಕ್ಷಿಣದ ಮಹೋನ್ನತ ಚಿತ್ರ ನಟ ಕಮಲ ಹಾಸನ್‌ ಅವರು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ? ಎಂಬ ಕುತೂಹಲ ಮೂಡಿದೆ.

ಕಮಲ ಹಾಸನ್‌ ಅವರ ಮಾತುಗಳಲ್ಲೇ ಇಂತಹ ಸ್ಪಷ್ಟ ಸುಳಿವು ಸಿಕ್ಕಿದೆ. ‘ಪರಿಣಾಕಾರಿ ರಾಜಕಾರಣಿ’ಯಾಗುವ ಉದ್ದೇಶದಿಂದ ತಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ ಎಂದು ಕಮಲ್‌ ಹೇಳಿದ್ದಾರೆ. ಮಕ್ಕಳ್‌ ನೀತಿ ಮಯ್ಯಮ್‌ (ಎಂಎನ್‌ಎಂ) ಪಕ್ಷದ ಸ್ಥಾಪಕರಾಗಿರುವ  ರಾಜಕೀಯಕ್ಕಾಗಿ ನಟನೆ ತೊರೆಯುತ್ತಿದ್ದಾರೆ.

ಕಮಲ ಹಾಸನ್‌ 1996ರಲ್ಲಿ ಇಂಡಿಯನ್‌ ಎಂಬ ಸೂಪರ್‌ ಹಿಟ್‌ ಚಿತ್ರ ನೀಡಿದ್ದರು. ಇದೀಗ ನಿರ್ಮಾಣ ಹಂತದಲ್ಲಿರುವ ಇಂಡಿಯನ್‌-2 ಚಿತ್ರ ಬಹುತೇಕ ಅವರ ಕೊನೆಯ ಸಿನಿಮಾ ಆಗಲಿದೆ ಎನ್ನಲಾಗಿದೆ. ನೀವೊಬ್ಬ ಪರಿಣಾಮಕಾರಿ ರಾಜಕಾರಣಿಯಾಗಬೇಕಿದ್ದರೆ ನೀವು ನಿಮ್ಮ ಸಂಪೂರ್ಣ ಸಮಯವನ್ನು ರಾಜಕಾರಣಕ್ಕೆ ಕೊಡಬೇಕಾಗುತ್ತದೆ. ಹಾಗಾಗಿ ನಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ ಎಂದು ಕಮಲ ಹಾಸನ್‌ ಹೇಳಿದರು.

ಹಾಗಿದ್ದರೂ ನನ್ನ ಪ್ರೊಡಕ್ಷನ್‌ ಕಂಪೆನಿ ಮುಂದುವರಿಯುತ್ತದೆ. ನನ್ನ ಬದಲು ಬೇರೊಬ್ಬರು ಅದನ್ನು ನಡೆಸುತ್ತಾರೆ ಎಂದು 64ರ ಹರೆಯದ ನಟ-ರಾಜಕಾರಣಿ ಕಮಲ ಹಾಸನ್‌ ಅವರು ಕೊಚ್ಚಿ ಸಮೀಪದ ಕಿಳಕ್ಕಂಬಳಮ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಆದರೆ, ಇಂಡಿಯನ್‌-2 ಅಲ್ಲದೆ ಕಮಲ ಹಾಸನ್‌ ಅವರ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಸ್ವಂತ ನಿರ್ದೇಶನದ ತ್ರಿಭಾಷಾ ಚಿತ್ರ ಶಾಬಾಷ್‌ ನಾಯ್ಡು ಮತ್ತು ಹೆಸರಿಡದ ಇನ್ನೊಂದು ಚಿತ್ರ. ಇವುಗಳ ಬಳಿಕ ಬೇರೆ ಯಾವುದೇ ಹೊಸ ಚಿತ್ರಕ್ಕೆ ಕಮಲ ಹಾಸನ್‌ ಸಹಿ ಮಾಡುವುದಿಲ್ಲ ಎಂದು ಅವರಿಗೆ ನಿಕಟವಿರುವ ಚೆನ್ನೈ ಮೂಲಗಳು ತಿಳಿಸಿವೆ. (ಎನ್.ಬಿ)

Leave a Reply

comments

Related Articles

error: