ದೇಶಮನರಂಜನೆ

ಹೃದಯಾಘಾತದಿಂದ ಬಾಲಿವುಡ್ ಹಿರಿಯ ನಟ ಓಂಪುರಿ ನಿಧನ

‘ಕಂಚಿನ ಕಂಠ’ ಎಂದೇ ಹೆಸರಾಗಿದ್ದ  ಬಾಲಿವುಡ್ ಹಿರಿಯ ನಟ ಓಂಪುರಿ(66) ಅವರು ಶುಕ್ರವಾರ ಬೆಳಗ್ಗೆ ಮುಂಬೈಯಲ್ಲಿರುವ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರು ಕನ್ನಡ, ಹಿಂದಿ ಸೇರಿ 6 ಭಾಷೆಗಳಲ್ಲಿ ನಟಿಸಿದ್ದರು. 2 ಬಾರಿ ರಾಷ್ಟ್ರೀಯ ಪ್ರಶಸ್ತಿ, 6 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, 5 ಅಂತಾರಾಷ್ಟ್ರೀಯ ಮತ್ತು ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

ಓಂಪುರಿ ಅವರು 1950 ಅಕ್ಟೋಬರ್ 18ರಂದು ಹರ್ಯಾಣದ ಅಂಬಾಲದಲ್ಲಿ ಪಂಜಾಬಿ ಕುಟುಂಬವೊಂದರಲ್ಲಿ ಜನಿಸಿದ್ದರು. ಅವರ ತಂದೆ ರೈಲ್ವೆ ಮತ್ತು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1976ರಲ್ಲಿ ಮರಾಠಿ ಚಿತ್ರರಂಗದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದರು. ಕನ್ನಡದ ಎ.ಕೆ.47, ಸಂತೆಯಲ್ಲಿ ನಿಂತ ಕಬೀರ, ಟೈಗರ್, ದ್ರುವ, ತಬ್ಬಲಿಯು ನೀನಾದೆ ಮಗನೆ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

1993ರಲ್ಲಿ ನಂದಿತಾ ಅವರನ್ನು ವರಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2013ರಲ್ಲಿ ಇವರು ಡಿವೋರ್ಸ್ ಪಡೆದಿದ್ದರು. ಇವರಿಗೆ ಇಶಾನ್ ಎಂಬ ಮಗ ಇದ್ದಾನೆ.

Leave a Reply

comments

Related Articles

error: