ಲೈಫ್ & ಸ್ಟೈಲ್

ಕಣ್ಣಿನ ಆರೋಗ್ಯ ಕಾಪಾಡಲು ಇಲ್ಲಿವೆ ಸರಳ ಸೂತ್ರಗಳು

ಬೆಂಗಳೂರು (ಡಿ.12): “ಸರ್ವೇಂದ್ರಿಯಾಣಂ ನಯನಮ್ ಪ್ರಧಾನಂ..” ಎಂಬ ಮಾತಿನಂತೆ  ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವು  ಕೊಂಡರೆ, ಹತ್ತು ಹಲವು ಸಮಸ್ಯೆಗಳೂ ಶಮನವಾದಂತೆಯೇ ಸರಿ.

ಮುಂಜಾನೆಯ ಹಾಗೂ ಸಂಜೆಯ ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್-ಡಿ ಒದಗಿಸುತ್ತದೆ. ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಒಳಿತು. ಈ ಕಿರಣಗಳು ಕಣ್ಣಿನ ಮೇಲೆ ಬೀಳುವುದರಿಂದ ಸ್ನಾಯುಗಳು ಬಲಗೊಂಡು, ದೃಷ್ಟಿ ಉತ್ತಮಗೊಳ್ಳುತ್ತದೆ.

  • ಎರಡೂ ಅಂಗೈಗಳನ್ನು ಒಂದಕ್ಕೊಂದು ಉಜ್ಜಿ, ಬರುವ ಶಾಖವನ್ನು ಕಣ್ಣುಗಳ ಮೇಲಿಡಬೇಕು. ಕಣ್ಣುಗಳ ಆಯಾಸವನ್ನು ಇದು ಕಡಿಮೆ ಮಾಡಿ, ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
  • ಸದಾ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರಾದರೆ, ಆಗಾಗ ಕಣ್ಣುಗಳನ್ನು ಕೆಲವು ಸೆಕೆಂಡ್‌ಗಳ ಕಾಲ ನಿರಂತರವಾಗಿ ಮಿಟುಕಿಸುತ್ತಿರಬೇಕು. ಆಯಾಸ ತೊಲಗಿಸಲು ಇದು ನೆರವಾಗುತ್ತದೆ. ಕಣ್ಣು ನೋವನ್ನೂ ಇದು ನಿವಾರಿಸುತ್ತದೆ.
  • ಮೊಬೈಲ್, ಕಂಪ್ಯೂಟರ್ ಅಥವಾ ಯಾವುದೇ ಗ್ಯಾಜೆಟ್ ಬಳಕೆಯಿಂದ ಕಣ್ಣು ಹಾಳಾಗುವುದು ಬೇಗ. ವರ್ಷಕ್ಕೊಮ್ಮೆಯಾದರೂ ಕಣ್ಣನ್ನು ತಜ್ಞರ ಬಳಿ ಪರೀಕ್ಷಿಸಿಕೊಳ್ಳಬೇಕು. ಆಗಾಗ ಕಣ್ಣನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳುತ್ತಿರಬೇಕು.
  • ಹುಬ್ಬಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒತ್ತಡ ನಿವಾರಣೆಯಾಗುತ್ತದೆ. ಕಣ್ಣಿಗೂ ತಂಪು.
  • ನೆತ್ತಿಗೆ ಹರಳೆಣ್ಣೆ ಹಾಕ್ಕೊಂಡು ತಲೆ ಸ್ನಾನ ಮಾಡಿದರೂ, ದೇಹವನ್ನು ತಂಪಾಗಿಡುವ ಜತೆಗೆ ಕಣ್ಣನ್ನೂ ತಂಪಾಗಿಡುತ್ತದೆ.
  • ಸಮಯ ಸಿಕ್ಕಾಗಲೆಲ್ಲಾ ಕಣ್ಣಿನ ಗುಡ್ಡೆಯನ್ನು ಮೇಲಿಂದ, ಕೆಳಕ್ಕೆ, ಎಡದಿಂದ-ಬಲಕ್ಕೆ ಚಲಿಸುತ್ತಿರಬೇಕು.
  • ಲೋಳೆಸರ, ಮತ್ತಿಸೊಪ್ಪು ಅಥವಾ ದಾಸವಾಳದ ಸೊಪ್ಪಿನ ರಸವನ್ನು ತಲೆಗೆ ಹಚ್ಚಿಕೊಂಡರೂ ಕಣ್ಣಿನ ಆರೋಗ್ಯಕ್ಕೆ ಒಳಿತು.
  • ಸಾಧ್ಯವಾದಷ್ಟು ಮನೆಯಲ್ಲಿಯೇ ಮಾಡಿದ ಕಣ್ಣು ಕಪ್ಪನ್ನು ಹಚ್ಚಿ. ರಾಸಾಯನಿಕ ವಸ್ತುಗಳು ತುರಿಕೆಯಂಥ ಸಮಸ್ಯೆಯನ್ನು ತಂದೊಡ್ಡುವುದಲ್ಲದೇ, ಕಣ್ಣಿಗೆ ಆಯಾಸ ತರುತ್ತದೆ. (ಎನ್.ಬಿ)

Leave a Reply

comments

Related Articles

error: