ಮೈಸೂರು

ಅಯೋಧ್ಯೆಯಲ್ಲಿ ಮಂದಿರ-ಮಸೀದಿಯೂ ಬೇಡ, ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮಾಡಲಿ : ಪ್ರೊ.ಕೆಎಸ್ ಭಗವಾನ್

ಮೈಸೂರು,ಡಿ.5:- ಅಯೋಧ್ಯೆಯಲ್ಲಿ ಮಂದಿರವೂ ಬೇಡ ಮಸೀದಿಯೂ ಬೇಡ. ಆ ಸ್ಥಳದಲ್ಲಿ  ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮಾಡಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಕೆಎಸ್ ಭಗವಾನ್ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೆ ತಂದ ಮೀಸಲಾತಿ 100 ವರ್ಷ ಹಿನ್ನೆಲೆ ವಿವಿಧ ಪ್ರಗತಿಪರ ಸಂಘಟನೆಗಳಿಂದ ನಾಲ್ವಡಿಯವರ ಸಮಾಧಿಗೆ ಪುಷ್ಪಾರ್ಚನೆ  ಮಾಡಿ ಮೌನ ಪ್ರತಿಭಟನೆಯಲ್ಲಿ  ಪಾಲ್ಗೊಂಡು ಮಾತನಾಡಿ ಆ ಜಾಗದಲ್ಲಿ ಯಾವ ಮಂದಿರ ನಿರ್ಮಾಣ ಮಾಡಿದರೆ ಶಾಂತಿ ಕದಡುತ್ತದೆ. ಈ ಜಾಗದ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತೆ. ಹೀಗಾಗಿ ಅಲ್ಲಿ ಆ ಸ್ಥಳದಲ್ಲಿ  ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮಾಡಲಿ. ರಾಷ್ಟ್ರೀಯ ಆಸ್ತಿ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: