ಮೈಸೂರು

ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ಮಹಾಮೃತ್ಯುಂಜಯ ಹೋಮ

ಮೈಸೂರು ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ  ಸರಣಿ ಸಾವಿನ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದ ಎದುರು ವಿಶ್ವಕ್ಷೇಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಮಹಾಮೃತ್ಯುಂಜಯ ಹೋಮವನ್ನು ಆಯೋಜಿಸಲಾಗಿತ್ತು.

ಮೃಗಾಲಯದ ಮುಂಭಾಗ ಪುರೋಹಿತರಾದ ಪ್ರಹ್ಲಾದ್ ಮತ್ತು ಮಂಜುನಾಥ ಅವರ ಅಧ್ವೈರ್ಯದಲ್ಲಿ ಮೃತ್ಯುಂಜಯ ಹೋಮ ಜರುಗಿತು. ಬಿಜೆಪಿ ಮುಖಂಡ ಜೋಗಿ ಮಂಜು ಮಾತನಾಡಿ ಮೃಗಾಲಯದ ಅಧಿಕಾರಿಗಳು  ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರೂ ಪ್ರಾಣಿ-ಪಕ್ಷಿಗಳು ಸಾವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಾಣಿ-ಪಕ್ಷಿಗಳ ಸಂಕುಲ ಉಳಿಯಬೇಕು. ಅವುಗಳ ಆರೋಗ್ಯವೃದ್ಧಿಗಾಗಿ ಈ ಹೋಮವನ್ನು ಆಯೋಜಿಸಲಾಗಿದೆ ಎಂದರು.

ವಿಕ್ರಂ ಮಾತನಾಡಿ ಮನುಷ್ಯರಾದರೆ ಏನಾದರೂ ಹೇಳಿಕೊಳ್ಳುತ್ತೇವೆ. ಆದರೆ ಪ್ರಾಣಿ-ಪಕ್ಷಿಗಳಿಗೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ವಯೋಸಹಜ ಹಾಗೂ ಅಕಾಲಿಕ ಮರಣದಿಂದ ಪಕ್ಷಿಸಂಕುಲಗಳು ನಾಶವಾಗಬಾರದು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ಅಜಯಶಾಸ್ತ್ರಿ, ನೀಲಕಂಠ ಸೇರಿದಂತೆ ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು.

Leave a Reply

comments

Related Articles

error: