ಪ್ರಮುಖ ಸುದ್ದಿಮೈಸೂರು

ವೈದ್ಯರ ನಿರ್ಲಕ್ಷ್ಯೆಯಿಂದ ರೋಗಿ ಸಾವು : ವೈದ್ಯರ ವಿರುದ್ಧ ಕ್ರಮಕ್ಕೆ ದೂರು

ಸಿಗ್ಮಾ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮೈಸೂರು,ಡಿ.5 : ಪೈಲ್ಸ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧರೊಬ್ಬರು ವೈದ್ಯರ ನಿರ್ಲಕ್ಷ್ಯೆಯಿಂದಾಗಿ ಸಾವನ್ನಪ್ಪಿದ ಘಟನೆಯ ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಒತ್ತಾಯಿಸಿ ದೂರು ದಾಖಲಿಸಲಾಗಿದೆ.

ವಿವರ : ಗುಂಡ್ಲುಪೇಟೆ ತಾಲ್ಲೂಕಿನ ಕೊಡಗಾಪುರ ಗ್ರಾಮದ 70 ವರ್ಷದ ನಾಗಯ್ಯ ಎಂಬುವವರಿಗೆ ಪೈಲ್ಸ್ ಸಮಸ್ಯೆ ಕಾಣಿಸಿಕೊಂಡಿತ್ತು, ಇದರ ಚಿಕಿತ್ಸೆಗೆಂದು ನಗರದ ಸರಸ್ವತಿಪುರಂನ ಸಿಗ್ಮಾ ಆಸ್ಪತ್ರೆಗೆ ದಾಖಲಾಗಿದ್ದರು, ಸುಮಾರು 60 ಸಾವಿರ ರೂ.ಗಳ ಒಪ್ಪಂದದಂತೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.

ಆದರೆ ಶಸ್ತ್ರಚಕಿತ್ಸೆಯಾದಾಗಿನಿಂದ ನಾಗಯ್ಯನವರ ಆರೋಗ್ಯ ಕ್ಷೀಣಿಸಿದ್ದು, ಆವರಿಗೆ ರಕ್ತ ಸೋರಿಕೆಯೇ ನಿಂತಿರಲಿಲ್ಲ, ಇದಕ್ಕಾಗಿ ಹಲವಾರು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತಾದರೂ ಕೊನೆಗೆ ಅವುಗಳು ಫಲಕಾರಿಯಾಗದೆ ಡಿ.3ರಂದು ಮರಣವನ್ನೊಪ್ಪಿದ್ದಾರೆ, ಅವರ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯೆ ಕಾರಣ ಎಂದು ನಾಗಯ್ಯನವರ ಪುತ್ರಿ ಸುನಂದ ಆರೋಪಿಸಿದ್ದಾರೆ.

ಅವರಿಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಯಾವುದೇ ಕಾಯಿಲೆಗಳು ಇರಲಿಲ್ಲ, ಪೈಲ್ಸ್ ಇತ್ತು, ಮಲವಿಸರ್ಜನೆ ಸಮಯದಲ್ಲಿ ಸ್ವಲ್ಪ ರಕ್ತ ಸೋರಿಕೆಯಾತ್ತಿತ್ತು, ಇಂತಹ ಸಾಮಾನ್ಯ ಕಾಯಿಲೆಯ ಶಸ್ತ್ರ ಚಿಕಿತ್ಸೆಗೆಂದು ಬಂದಾಗ ಒಪ್ಪಂದ ಮೇಲೆ ಅಪರೇಷನ್ ಮಾಡಲಾಗಿತ್ತು, ಆದರೆ ಆ ಅಪರೇಷನ್ ಸರಿ ಮಾಡಲು ಹಲವಾರು ಅಪರೇಷನ್ ಮಾಡಿದ್ದು ತಮಗೆ 15 ಲಕ್ಷ ಬಿಲ್ ನೀಡಿದ್ದಾರೆ.

ಶಸ್ತ್ರ ಚಿಕಿತ್ಸೆಗೆಂದು ಅವರನ್ನು ನ. 1ರಿಂದ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದೆ ಕೊನೆಗೆ ಅವರ ಸಾವಿನ ವಿಷಯ ನೀಡಿದ್ದು.  ತಮ್ಮ ತಂದೆ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸುನಂದ ಅವರು ಸರಸ್ವತಿಪುರಂನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: