ಪ್ರಮುಖ ಸುದ್ದಿವಿದೇಶ

ಮೃತ ಮಹಿಳೆಯ ಗರ್ಭಕೋಶ ಕಸಿ ಮಾಡಿ ಜನಿಸಿದ ವಿಶ್ವದ ಮೊದಲ ಮಗು ಇದು!

ಬ್ರೆಜಿಲ್ (ಡಿ.5): ಮೃತಪಟ್ಟ ಮಹಿಳೆಯ ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆಯೋರ್ವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ರೀತಿಯ ಘಟನೆ ವಿಶ್ವದಲ್ಲೇ ಮೊದಲ ಬಾರಿಯಾಗಿದೆ.

ಹಿಂದೆ ಅನೇಕ ದೇಶಗಳಲ್ಲಿ ಮೃತ ಮಹಿಳೆಯರ ಗರ್ಭಕೋಶವನ್ನು ಇನ್ನೋರ್ವ ಮಹಿಳೆಗೆ ಕಸಿ ಮಾಡುವ ಯತ್ನ ನಡೆದಿತ್ತು. 10 ಬಾರಿ ಈ ರೀತಿ ಗರ್ಭಕೋಶದ ಕಸಿ ಯತ್ನಗಳು ವಿಫಲವಾದ ನಂತರ ಇದೀಗ 11ನೇ ಪ್ರಯತ್ನದ ಯಶಶ್ವಿಯಾಗಿದ್ದು ವೈದ್ಯಕೀಯ ಲೋಕದಲ್ಲಿ ಭಾಷ್ಯ ಬರೆದಂತಾಗಿದೆ. ಗರ್ಭಕೋಶದ ಕಸಿ ಯತ್ನವು ಮೊದಲ ಬಾರಿಗೆ 2013ರಲ್ಲಿ ನಡೆದಿತ್ತು. 2018ರಲ್ಲಿ ಈ ಯತ್ನ ಸಫಲವಾಗಿದೆ.

ಈ ಮಗು 2.7 ಕೆಜಿಯಷ್ಟು ತೂಕವಿದ್ದು, ಆರೋಗ್ಯವಾಗಿದೆ. 8 ಗಂಟೆಗಳ ಕಾಲ ಯಾವುದೇ ಆಮ್ಲಜನಕ ಪೂರೈಕೆ ಇಲ್ಲದೆ 32 ವರ್ಷದ ಮಹಿಳೆಗೆ ಗರ್ಭಕೋಶವನ್ನು 2016ರ ಸೆಪ್ಟೆಂಬರ್ ತಿಂಗಳಲ್ಲಿ ಕಸಿ ಮಾಡಲಾಗಿತ್ತು. 45 ವರ್ಷದ ಮೆದುಳು ನಿಷ್ಕ್ರಿಯವಾದ ಮಹಿಳೆಯ ಗರ್ಭಕೋಶವನ್ನು ಈಕೆಗೆ ಕಸಿ ಮಾಡಲಾಗಿದ್ದು, ಬಳಿಕ ಆಕೆಗೆ ಫಲವತ್ತಾದ ಮೊಟ್ಟೆಗಳನ್ನು ಕಸಿ ಮಾಡಿ ಮಗುವನ್ನು ಪಡೆಯಲಾಗಿದೆ. (ಎನ್.ಬಿ)

Leave a Reply

comments

Related Articles

error: