ದೇಶ

ಮೋಸ್ಟ್‌ ವಾಂಟೆಡ್‌ ಉಗ್ರ ಮರ್ಜಾನ್‌ ಪೊಲೀಸ್ ಗುಂಡೇಟಿಗೆ ಬಲಿ

ಢಾಕಾಬಾಂಗ್ಲಾದೇಶದ ಉಗ್ರ ನಿಗ್ರಹ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ  ಜಮಾತ್‌ ಉಲ್‌ ಮುಜಾಹಿದೀನ್‌ ನ ಮೋಸ್ಟ್‌ ವಾಂಟೆಡ್‌ ನಾಯಕ ನೂರುಲ್‌ ಇಸ್ಲಾಮ್‌ ಅಲಿಯಾಸ್‌ ಮರ್ಜಾನ್‌ ಮತ್ತು ಇನ್ನೋರ್ವ ಅಪರಿಚಿತ ಉಗ್ರ ಹತರಾಗಿದ್ದಾರೆ ಎನ್ನಲಾಗಿದೆ.

ಹತನಾದ ಉಗ್ರ ಮರ್ಜಾನ್ ಕಳೆದ ವರ್ಷ ಢಾಕಾದ ಗುಲ್‌ಶನ್‌ ಹೋಲಿ ಆರ್ಟಿಸಾನ್‌ ಬೇಕರಿಯ ಮೇಲೆ ನಡೆದಿದ್ದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಈ ದಾಳಿಯಲ್ಲಿ ಸುಮಾರು 22 ಮಂದಿ ಸಾವನ್ನಪ್ಪಿದ್ದರು.

ಉಗ್ರ ಮರ್ಜಾನ್ ತನ್ನ ಸಹಚರನೊಂದಿಗೆ ನಿರ್ದಿಷ್ಟ ಸ್ಥಳದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಉಗ್ರ ನಿಗ್ರಹ ದಳದ ಮುಖ್ಯಸ್ಥ ಮೊನಿರುಲ್‌ ಇಸ್ಲಾಂ ತಿಳಿಸಿದ್ದಾರೆ.

Leave a Reply

comments

Related Articles

error: