ಕರ್ನಾಟಕ

ಆನ್ ಲೈನ್ ಮೂಲಕ ಎಪಿಎಲ್‌, ಬಿಪಿಎಲ್ ಕಾರ್ಡ್ ವಿತರಣೆಗೆ ಚಾಲನೆ ಜ.9ರಂದು

ಬೆಂಗಳೂರುದೇಶದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದ್ದು, ಎಪಿಎಲ್‌ ಕಾರ್ಡ್‌ ವಿತರಣೆಗೆ ಜನವರಿ 9ರಂದು ಚಾಲನೆ ನೀಡಲಾಗುತ್ತದೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್‌ ಈ ಬಗ್ಗೆ ಮಾಹಿತಿ ನೀಡಿದರು. ಜನ ರಾಜ್ಯದ ಯಾವುದೇ ಭಾಗದಿಂದ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ ಆಧಾರ್‌ ಕಾರ್ಡ್‌ ಹೊಂದಿರುವ ವಿಳಾಸಕ್ಕೆ ಎಪಿಎಲ್‌ ಕಾರ್ಡ್‌ ವಿತರಿಸಲಾಗುವುದು ಎಂದು ಹೇಳಿದರು.

ಆಹಾರ ಇಲಾಖೆ ವೆಬ್‌ಸೈಟ್‌ //ahara.kar.nic.in/ಗೆ ಹೋಗಿ ಅಲ್ಲಿ ಹೊಸ ಕಾರ್ಡ್‌ ಅರ್ಜಿ ಸಲ್ಲಿಸುವ ಭಾಗವನ್ನು ಕ್ಲಿಕ್‌ ಮಾಡಬೇಕು. ಅಲ್ಲಿ ಆಧಾರ್‌ ಸಂಖ್ಯೆ ನಮೂದಿಸಿದರೆ ಆಧಾರ್‌ ಜತೆ ಜೋಡಿಸಿರುವ ಮೊಬೈಲ್‌ಗೆ ಒನ್‌ ಟೈಮ್‌ ಪಾಸ್‌ವರ್ಡ್‌ (ಓಟಿಪಿ ಸಂಖ್ಯೆ) ಬರುತ್ತದೆ. ಅದನ್ನು ಟೈಪ್‌ ಮಾಡಿದರೆ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಇದಕ್ಕೆ ಕುಟುಂಬದ ಇನ್ನಷ್ಟು ಸದಸ್ಯರ ಹೆಸರು ನೋಂದಾಯಿಸಬೇಕಾದರೆ ಅವರ ಆಧಾರ್‌ ಕಾರ್ಡ್‌ ಸಂಖ್ಯೆ ನಮೂದಿಸಬೇಕು. ಬಳಿಕ ಆ ಆಧಾರ್‌ಗೆ ಜೋಡಿಸಿರುವ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ ಕ್ಲಿಕ್‌ ಮಾಡಿದರೆ ಅವರ ಹೆಸರು ಸೇರಿಕೊಳ್ಳುತ್ತದೆ. ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದರೂ ಆಧಾರ್‌ ಸಂಖ್ಯೆ ಮತ್ತು ಒಟಿಪಿ ಸಂಖ್ಯೆ ಮೂಲಕ ಅವರ ಹೆಸರು ನೋಂದಾಯಿಸಬಹುದು. 15 ದಿನಗಳಲ್ಲಿ ಮನೆ ಬಾಗಿಲಿಗೆ ಕಾರ್ಡ್‌ ಬರುತ್ತದೆ. 100 ರೂ. ಪಾವತಿಸಿ ಪಡೆದುಕೊಳ್ಳಬಹುದು. ಜ.20ರೊಳಗೆ ಬಿಪಿಎಲ್‌ ಕಾರ್ಡ್‌ಗಳಿಗೂ ಅರ್ಜಿ ಸ್ವೀಕಾರ ಆರಂಭಿಸಿ ಕಾರ್ಡ್‌ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

 

Leave a Reply

comments

Related Articles

error: