ದೇಶಪ್ರಮುಖ ಸುದ್ದಿ

ಅಮ್ರಪಾಲಿ ಹೋಟೆಲ್ ಸೇರಿದಂತೆ ಆಸ್ತಿ ಜಪ್ರಿಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ (ಡಿ.6): ಆಮ್ರಪಾಲಿ ಸಮೂಹ ಸಂಸ್ಥೆಯ ಐಷಾರಾಮಿ ಹೋಟೆಲ್, ಸಿನಿಮಾ ಹಾಲ್, ಮಾಲ್, ಕಾರ್ಖಾನೆ ಸೇರಿದಂತೆ ಸಮಸ್ತ ಆಸ್ತಿಯನ್ನು ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನೋಯ್ಡಾದಲ್ಲಿರುವ ಕಚೇರಿ ಸೇರಿದಂತೆ ದೇಶದೆಲ್ಲೆಡೆ ಇರುವ ಬ್ರ್ಯಾಂಚ್‍ಗಳನ್ನು ಬಂದ್ ಮಾಡುವಂತೆ ಸಾಲ ಮರುಪಾವತಿ ನ್ಯಾಯಾಧೀಕರಣ (ಡಿ.ಆರ್.ಟಿ)ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಮನೆ ಪಡೆಯಲು ಹಣ ಪಾವತಿಸಿದವರಿಗೆ ಡಿ.10ರೊಳಗೆ ಹಣ ಹಿಂತಿರುಗಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ. ಎಲ್ಲ ಆಸ್ತಿಯನ್ನು ಹರಾಜು ಹಾಕಿ ಸಂತ್ರಸ್ತರಿಗೆ ಹಣ ವಿತರಿಸುವ ಹಾಗೂ ಬಾಕಿ ಸಾಲ ಪಾವತಿ ಮಾಡಿಸಿಕೊಳ್ಳುವ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

42ಸಾವಿರ ಮನೆ ಖರೀದಿದಾರರಿಗೆ ವಂಚಿಸಿರುವ ಆರೋಪ ಆಮ್ರಪಾಲಿ ಸಂಸ್ಥೆ ಮೇಲಿದೆ. ಖರೀದಿದಾರರಿಂದ ಪಡೆದ ಸುಮಾರು 3,000 ಕೋಟಿ ರೂ. ಮೊತ್ತವನ್ನು ಬೇರೆ ಉದ್ದೇಶಕ್ಕೆ ಸಂಸ್ಥೆ ಬಳಸಿರುವುದಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಆಮ್ರಪಾಲಿ ಗ್ರೂಪ್ ಎಂಡಿ ಅನಿಲ್ ಶರ್ಮ ಹಾಗೂ ನಿರ್ದೇಶಕರಿಗೆ ನ್ಯಾ.ಅರುಣ್ ಮಿಶ್ರಾ, ಯು.ಯು ಲಲಿತ್ ಅವರಿದ್ದ ನ್ಯಾಯಪೀಠವು ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ವಿಸ್ತರಣೆ ಮಾಡುವಂತೆ ಸೂಚನೆ ನೀಡಲಾಗಿದೆ. (ಎನ್.ಬಿ)

Leave a Reply

comments

Related Articles

error: