ಪ್ರಮುಖ ಸುದ್ದಿಮೈಸೂರು

ಡಿ.8ರಂದು ಮಿಸ್ಟರ್ ಅಂಡ್ ಮಿಸಸ್ ಹೆರಿಟೇಜ್ ಪ್ಯಾಷನ್ ಶೋ

ಮೈಸೂರು, ಡಿ.6 : ಭಾರತೀಯ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಮೈಸೂರಿನ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು  ಮಿಸ್ಟರ್ ಅಂಡ್ ಮಿಸಸ್ ಹೆರಿಟೇಜ್ ಫ್ಯಾಷನ್ ಶೋ ಅನ್ನು ಡಿ.8 ರಂದು ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಧರ್ಮ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೋಟೆಲ್ ರಿಯೋ ಮೆರಿಡಿಯನ್  ಮಧ್ಯಾಹ್ನ 3 ಗಂಟೆಗೆ ಫ್ಯಾಷನ್ ಶೋ ನಡೆಯಲಿದೆ.ಇತ್ತೀಚಿನ ದಿನಗಳಲ್ಲಿ ನಮ್ಮ ಹೆಮ್ಮೆಯ ಸಂಸ್ಕೃತಿ ಕಣ್ಮರೆಯಾಗುತ್ತಿದೆ.

ಅದಕ್ಕಾಗಿ ಈ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಸಾಂಪ್ರದಾಯಿಕ ಉಡುಗೆ,ರಾಜ ರಾಣಿ ,ಮೈಸೂರಿನ ಸಿಲ್ಕ್ ಸೀರೆಯನ್ನುಟ್ಟು ಫ್ಯಾಷನ್ ಶೋನಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಸಂಸ್ಕೃತಿ ಬಿಟ್ಟೋಗಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜೇಶ್ವರಿ,ಪ್ರೀತಂ ,ಭಾರ್ಗವಿ ಸೇರಿದಂತೆ ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: