ಮೈಸೂರು

ಸಾರ್ವಜನಿಕ ಶೌಚಾಲಯ ಉದ್ಘಾಟಿಸಿದ ಶಾಸಕ ಎಸ್.ಎ. ರಾಮದಾಸ್

ಮೈಸೂರು,ಡಿ.6:- ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ- 49 ರಲ್ಲಿ ಲಕ್ಷ್ಮೀಪುರಂ ಪೋಲಿಸ್ ಠಾಣೆಯ ಪಕ್ಕದಲ್ಲಿಂದು ಸಾರ್ವಜನಿಕ ಶೌಚಾಲಯವನ್ನು ಶಾಸಕ ಎಸ್.ಎ. ರಾಮದಾಸ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಈ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶೌಚಾಲಯ ಅತ್ಯಗತ್ಯವಾಗಿತ್ತು. ಆರ್.ಟಿ.ಓ ಕಛೇರಿಗೆ ಬರುವಂತಹ, ಆರ್.ಟಿ. ಓ ವೃತ್ತ ಅತಿ ಹೆಚ್ಚು ಜನಸಂದಣೆಯ ಸ್ಥಳವಾಗಿದ್ದು ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗಿತ್ತು. ಇದನ್ನು ಮನಗೊಂಡು ಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ, ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಸಲಾಗಿತ್ತು.  ಸೂಚನೆಯ ಮೇರೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್ ಅವರು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಕಿರಿಯ ಸಹಾಯಕ ಇಂಜಿನೀಯರ್ ಮೋಹನ್‍ಕುಮಾರಿ, ಕಾರ್ಯ ನಿರೀಕ್ಷಕ ಅಂಜನಪ್ಪ, ಆರೋಗ್ಯ ಅಧಿಕಾರಿ ಮಂಜುನಾಥ್, ಇಂಜಿನೀಯರ್, ಕೃಷ್ಣೇಗೌಡ ನಾಗಶಂಕರ್, ಗುರುರಾಘವೇಂದ್ರ, ಮಂಜುನಾಥ್, ರಮೇಶ್, ಅನ್ನಪೂರ್ಣ, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: