ಮೈಸೂರು

ವೀ2 ಸಿನಿಮಾ ಪೋಸ್ಟರ್ ಬಿಡುಗಡೆ

ಮೈಸೂರಿನ ಕಿರಣ್ ಕ್ರಿಯೇಷನ್ಸ್ ನ‘ವೀ2’ ಸಿನಿಮಾದ ಪೋಸ್ಟರ್‍ ಅನ್ನು ಶುಕ್ರವಾರ ಪತ್ರಕರ್ತರ ಭವನದಲ್ಲಿ ಸಿನಿಮಾ ತಂಡ ಬಿಡುಗಡೆಗೊಳಿಸಿತು.

ಈ ಸಂದರ್ಭದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕ ನಾಗರಾಜ್ ಸಿ ಮಾತನಾಡಿ ಜೀವನಕ್ಕೆ ಹಣವೊಂದೇ ಮುಖ್ಯವಲ್ಲ ಎನ್ನುವ ವಿಷಯಾಧಾರಿತವಾಗಿದ್ದು, ಯುವಕರಿಗೆ ಉತ್ತಮ ಸಂದೇಶ ನೀಡಲು ಚಿತ್ರ ನಿರ್ಮಾಣ ಮಾಡಲಾಗಿದೆ. ಇದೊಂದು ವಿಶ್ವ ದಾಖಲೆಯಾಗಲಿದೆ ಎಂದು ಆಶಿಸಿ, ಎರಡು ಗಂಟೆ ಕಾಲಾವಧಿಯಲ್ಲಿ ನಡೆಯುವ ಚಿತ್ರದಲ್ಲಿ ಇಬ್ಬರೇ ಪಾತ್ರಧಾರಿಗಳ ಸುತ್ತ ಕಥೆ ಹೆಣೆಯಲಾಗಿದೆ. ಮಗಳ ಮದುವೆಗೆಂದು ಇರಿಸಿದ್ದ ಹಣವನ್ನು ಚಿತ್ರ ನಿರ್ಮಾಣಕ್ಕೆ ಬಳಸಿದ್ದೇನೆ. ಸಿನಿಮಾ ಕಲಾವಿದನ ನೈಜ ಕಥೆ ಹಾಗೂ ಪ್ರೇಕ್ಷಕರ ಕಾಲ್ಪನಿಕ ಕಥೆಯಾಗಿದ್ದು ನನ್ನ ಹಿತಶತ್ರುಗಳಿಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.

ಚಿತ್ರದ ನಟ ಕೃಷ್ಣನಾಗ್ ಮಾತನಾಡಿ ಸಿನಿಮಾಕ್ಕೆ ಕಥೆ, ಚಿತ್ರಕಥೆ,ಸಂಬಾಷಣೆ, ನಿರ್ದೇಶನ ಸೇರಿದಂತೆ ಇಬ್ಬರೇ ನಿರ್ವಹಿಸಿರುವುದು ಹೆಗ್ಗಳಿಕೆ, ಚಿತ್ರೀಕರಣವನ್ನು ಚಾಮುಂಡಿಬೆಟ್ಟ, ಮೈಸೂರು ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಶೇ.80ರಷ್ಟು ಕೆಲಸ ಮುಗಿದಿದ್ದು ಮಾರ್ಚ್‍ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಮೂಡಿದ್ದು ಮುಂದಿನ ದಿನಗಳಲ್ಲಿ ಯು-ಟ್ಯೂಬ್‍ನಲ್ಲಿ ಟೀಸರ್ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದ ಅಂಜನ್ ಮೀನ್ಕೆರೆ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

Leave a Reply

comments

Related Articles

error: