ಮೈಸೂರು

ಯುವರಾಜ ಕಾಲೇಜಿನ ಪದವಿ ಪ್ರದಾನ ಸಮಾರಂಭ ‘ಜ7’

ಮೈಸೂರು ವಿವಿಯ ಅಂಗಸಂಸ್ಥೆಯಾದ ಯುವರಾಜ ಕಾಲೇಜಿನ ಚತುರ್ಥ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಆರ್.ಗಣೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶುಕ್ರವಾರ ಪತ್ರಕರ್ತರ ಭವನದಲ್ಲಿ ಮಾತನಾಡಿ ಜ.7ರ ಶನಿವಾರ ಸಂಜೆ 4ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸುವರು. ಜವಾಹರಲಾಲ್ ನೆಹರು ಕೇಂದ್ರದ ಅಧ್ಯಕ್ಷ ಪ್ರೊ.ವಿ.ನಾಗರಾಜ ಪ್ರಧಾನ ಭಾಷಣ ಮಾಡುವರು.

11 ಚಿನ್ನದ ಪದಕ ಹಾಗೂ 26 ನಗದು ಬಹುಮಾನ ಸೇರಿದಂತೆ ಪದವಿ, ಸ್ನಾತಕ ಹಾಗೂ ಪಿ.ಜಿ ಸೇರಿದಂತೆ ಸುಮಾರು 481 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಆಹ್ವಾನ ತಲುಪದ ಅರ್ಹ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಎಂ.ವೆಂಕಟೇಶ್ ಹಾಗೂ ಕಾಂತಲಕ್ಷ್ಮಿ ಉಪಸ್ಥಿತರಿದ್ದರು.

Leave a Reply

comments

Related Articles

error: