ಮೈಸೂರು

ಸಮಾಜದ ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡವರು ರಾಜಶೇಖರ ಕೋಟಿ : ಆರ್.ರಾಜು ಬಣ್ಣನೆ

ಮಾಧ್ಯಮ ವಿಭಾಗದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೋಟಿ ಜನ-ಮನ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಡಿ.7:- ಸಮಾಜದ ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡವರು ರಾಜಶೇಖರ ಕೋಟಿ ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ಬಣ್ಣಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ರಾಜಶೇಖರ ಕೋಟಿ ಸಭಾಂಗಣದಲ್ಲಿಂದು ಜನನಿ ಸೇವಾಟ್ರಸ್ಟ್ ವತಿಯಿಂದ ಆಂದೋಲನ ಪತ್ರಿಕೆಯ ಅಂದಿನ ಸಂಪಾದಕ ದಿ.ರಾಜಶೇಖರ್ ಕೋಟಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಾಧ್ಯಮ ವಿಭಾಗದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೋಟಿ ಜನ-ಮನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅವರು ಕೇವಲ ಪತ್ರಕರ್ತರಾಗಿದ್ದರೆ ಜನಾನುರಾಗಿಯಾಗುತ್ತಿರಲಿಲ್ಲ. ಸಮಾನವಾಗಿ ಕಾಣಿಸಿಕೊಂಡವರು. ಅವರು ನುಡಿದಂತೆ ನಡೆಯುತ್ತಿದ್ದರು. ಪತ್ರಿಕೋದ್ಯಮಕ್ಕೆ ಜೀವನವನ್ನು ಮುಡುಪಾಗಿಟ್ಟವರು. ಸ್ವತಂತ್ರ ಧ್ವನಿಯಾಗಿ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರು. ಪತ್ರಿಕೋದ್ಯಮದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಯಾವುದೇ ವ್ಯಕ್ತಿ ಹೊಸದಾಗಿ ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು ಎಂದರು.

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್ ಮಾತನಾಡಿ ಕೋಟಿ ಕುರಿತು ಮಾತನಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಅವರೊಬ್ಬ ಉತ್ತಮ ವಾಗ್ಮಿ. ಮಾನವೀಯ ಮೌಲ್ಯ ಹೊಂದಿದ್ದವರು. ಸಮಾಜದ ಬಗ್ಗೆ ಅವರಲ್ಲಿದ್ದ ಕಾಳಜಿ, ಗೌರವ ಈ ಎಲ್ಲವೂ ನಮ್ಮೆಲ್ಲರ ಮನದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದೆ. ಮಾತಿಗಿಂತ ಲೇಖನಿ ಹರಿತ. ಮಾತು ಒಬ್ಬರನ್ನು ತಲುಪಬಲ್ಲದು, ಲೇಖನಿ ಕೋಟ್ಯಂತರ ಜನರನ್ನು ತಲುಪಲಿದೆ. ಕೋಟಿ ಅವರು ಹೆಸರಿಗೆ ತಕ್ಕಂತೆ ಬರವಣಿಗೆ, ಗುಣ, ನಡತೆಯಿಂದ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರು ಏಕೈಕ ಪತ್ರಿಕಾ ಸಂವಾದಕರು ಎಂದರೆ ತಪ್ಪಾಗಲಾರದು ಎಂದರಲ್ಲದೇ ಅವರಿಗಾಗಿ ತಾವು ಬರೆದ ಕವಿತೆ ವಾಚಿಸಿದರು. ‘ಜೀವನ ಸ್ವಾರ್ಥಕ್ಕಾಗಿ, ಕ್ಷಣಿಕ ಸುಖಕ್ಕಾಗಿ, ಹಣಗಳಿಸುವುದಿಲ್ಲವೆಂದು ಕೋಟಿ,ಕೋಟಿ, ನಿಸ್ವಾರ್ಥ ಸೇವೆಗಾಗಿ, ಪತ್ರಿಕಾರಂಗದ ಒಳಿತಿಗಾಗಿ ತಮ್ಮ ಬದುಕನ್ನೇ ಸವೆಸಿದವರು ರಾಜಶೇಖರ ಕೋಟಿ” ಎಂದರು.

ಪತ್ರಕರ್ತರ ಸಂಘದ ಅದ್ಯಕ್ಷ ಸಿ.ಕೆ.ಮಹೇಂದ್ರ ಮಾತನಾಡಿ ಪತ್ರಕರ್ತರು ನಿಷ್ಠುರವಾಗಿಯೇ ಇರುತ್ತಾರೆ. ವಿರೋಧಿಗಳು ಜಾಸ್ತಿ. ಸತ್ತ ನಂತರವೂ ಸಮಾಜ ಅವರನ್ನು ಗೌರವಿಸತ್ತೆ ಅಂದರೆ ಹೆಮ್ಮೆಯ ವಿಷಯ. ಕೋಟಿ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಿರುವುದು ಅಭಿನಂದನೀಯ. ಅವರು ಯಾವ ರೀತಿ ಸಮಾಜಮುಖಿಯಾಗಿದ್ದರು. ಯಾವ ರೀತಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು ಎನ್ನುವುದು ಮುಂದಿನ ಪತ್ರಕರ್ತರಿಗೆ ದಿಕ್ಸೂಚಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ವರದಿಗಾರಿಕೆಗಾಗಿ ಕನ್ನಡ ಪ್ರಭ ಪತ್ರಿಕೆಯ ಸಹ ಸಂಪಾದಕ ಅಂಶಿಪ್ರಸನ್ನಕುಮಾರ್, ಅತ್ಯುತ್ತಮ ಪತ್ರಿಕಾ ಛಾಯಾಗ್ರಹಣಕ್ಕಾಗಿ ಪ್ರಗತಿ ಗೋಪಾಲಕೃಷ್ಣ, ಅತ್ಯುತ್ತಮ ಮಾಧ್ಯಮ ಛಾಯಾಗ್ರಹಣಕ್ಕಾಗಿ ಮಧುಸೂದನ್ ಆರ್, ಡಾ.ರಘುರಾಂ ವಾಜಪೇಯಿ(ಧಾರ್ಮಿಕ ಕ್ಷೇತ್ರ), ಡಾ ಯದುಗಿರಿ(ಸಹಆರ್ಟ್ಸ್&ಮ್ಯೂಸಿಕ್), ಬಿ.ಸಿ.ಅಣ್ಣಯ್ಯ(ಸಮಾಜಸೇವಕ), ಶಾಂತಕುಮಾರಿ(ಚುಟುಕುಕವಯತ್ರಿ), ಬೋರಪ್ಪ(ರಾಜಕೀಯ ಕ್ಷೇತ್ರ), ಡಾ.ಆರ್.ಕಾಂತ(ಸಂಗೀತ ಕ್ಷೇತ್ರ), ಸಿದ್ದಲಿಂಗಯ್ಯ(ಸಂಸ್ಕೃತಿ ಚಿಂತಕ), ಯಶೋಧ(ಸಾಹಿತ್ಯ ಕ್ಷೇತ್ರ), ನರಸಿಂಹಣ್ಣ(ಆಟೋಚಾಲಕ), ಯಶೋದಾ ಬಾಯಿ(ನೃತ್ಯ) ಇವರಿಗೆ  ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ದಿ.ಸಿ.ಕೋ ಅಪರೇಟಿವ್ ಬ್ಯಾಂಕ್ ಗೌರವಾಧ್ಯಕ್ಷ ಡಾ.ಎಸ್.ನಾಗರತ್ನ, ಜನನಿ ಸೇವಾಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಅಶೋಕ್, ರೋಟರಿಯ ಡೈರೆಕ್ಟರ್ ಫಾರ್ ಕ್ಮಯುನಿಟಿ ಸರ್ವೀಸ್ ಗೌತಮ್ ಸಲಾಚ ಉಪಸ್ಥಿತರಿದ್ದರು. (ಜಿ.ಕೆ,ಎಸ್,ಎಚ್)

Leave a Reply

comments

Related Articles

error: