ಮೈಸೂರು

ಶ್ರೀ ಆಂಜನೇಯಸ್ವಾಮಿ ಉತ್ಸವ ಮದ್ಯಮಾರಾಟ ನಿಷೇಧ : ಡಿಸಿ ಅಭಿರಾಮ್ ಜಿ.ಶಂಕರ್ ಆದೇಶ

ಮೈಸೂರು. ಡಿ.7 :- ಪಿರಿಯಾಪಟ್ಟಣ ಟೌನ್‍ನಲ್ಲಿ ಶ್ರೀ ಆಂಜನೇಯಸ್ವಾಮಿ ದೇವರ ಉತ್ಸವ ಮತ್ತು ಮೆರವಣಿಗೆ ಕಾರ್ಯಕ್ರಮ ಡಿ.8ರಂದು ನಡೆಯಲಿದೆ. ಮೆರವಣಿಗೆ ಪಿರಿಯಾಪಟ್ಟಣ ಟೌನ್ ಒಳಕೋಟೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ಉಪ್ಪಾರಗೇರಿ ಮುಖಾಂತರ ಎಂ.ಜಿ.ರಸ್ತೆಗೆ ಬಂದು ನಂತರ ಸಿದ್ದಾಪುರವೃತ್ತ ಪಿರಿಯಾಪಟ್ಟಣ ಪೊಲೀಸ್ ಠಾಣೆ ಮುಂಭಾಗದಿಂದ ಬೆಟ್ಟದಪುರ ವೃತ್ತ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿ ನುಗ್ಗೇನಹಳ್ಳಿ ರಸ್ತೆಯ ಮುಖಾಂತರ ಮೋಹನ್ ಸ್ಕೀನ್ ಪ್ರಿಂಟರ್ಸ್ ಬಳಿ ಬಲಕ್ಕೆ ತಿರುಗಿ ಪುಷ್ಪ ಕಾನ್ವೆಂಟ್ ರಸ್ತೆಯಲ್ಲಿ ಸಾಗಿ ಗೋಣಿಕೊಪ್ಪ ರಸ್ತೆ ಮುಖಾಂತರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ಪುಟ್ಟಣ ಕಣಗಾಲ್ ರಂಗ ಮಂದಿರದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಸೇರಲಿದೆ.

ಸದರಿ ಮೆರವಣಿಗೆಯಲ್ಲಿ ಸುಮಾರು 5000 ಜನರು ಭಾಗವಹಿಸಲಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪಿರಿಯಾಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಇಂದು  ಸಂಜೆ 6 ಗಂಟೆಯಿಂದ ನಾಳೆ ಸಂಜೆ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಆದೇಶ ಹೊರಡಿಸಿದ್ದಾರೆ. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: