ಮೈಸೂರು

ಸ್ವಚ್ಛತೆ ಕುರಿತು ದೂರುಗಳಿದ್ದಲ್ಲಿ ಸಲ್ಲಿಸಿ

ಮೈಸೂರು. ಡಿ.8:-  ಬನ್ನೂರು ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಸ್ವಚ್ಪ ಸರ್ವೇಕ್ಷಣೆ-2019ರಲ್ಲಿ ಉತ್ತಮ ಶ್ರೇಯಾಂಕಗಳಿಸುವ ನಿಟ್ಟಿನಲ್ಲಿ  ಸ್ವಚ್ಪತೆಕುರಿತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸ್ವಚ್ಫತೆಗೆ ಸಂಬಂಧಿಸಿದ ದೂರುಗಳನ್ನು (ಚಿತ್ರ ಸಹಿತ) ಸಲ್ಲಿಸಲು(Swachihata App) Play store ನಿಂದಡೌನ್‍ಲೋಡ್ ಮಾಡಿಕೊಂಡು(APP) ಮೂಲಕ ದೂರು ಸಲ್ಲಿಸಬೇಕು.

ಬನ್ನೂರುಪುರಸಭೆ ವ್ಯಾಪ್ತಿಯ ಸಾರ್ವಜನಿಕರು ಹಾಗೂ ನಗರಕ್ಕೆ  ಭೇಟಿ ನೀಡುವಯಾವುದೇ ವ್ಯಕ್ತಿಗಳು ಸ್ವಚ್ಛತೆಗೆ ಆದ್ಯತೆ ನೀಡಲು ಪುರಸಭೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಶೌಚಾಲಯಗಳು ಹಾಗೂ ಪೆಟ್ರೋಲ್ ಬಂಕ್‍ಗಳಲ್ಲಿನ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಬಯಲು ಮಲ/ಮೂತ್ರ ವಿಸರ್ಜಿಸಬಾರದು.

ಘನತ್ಯಾಜ್ಯ ಮತ್ತು ನಿರ್ವಹಣೆ ನಿಯಮ-2016 ರಂತೆ ಮನೆ –ಮನೆಯಲ್ಲಿಉತ್ಪಾದಿಸಲಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಪ್ರತ್ಯೇಕವಾಗಿ ಬೇರ್ಪಡಿಸಿ ಪುರಸಭೆಯಆಟೋಟಿಪ್ಪರ್/ ತಳ್ಳುಗಾಡಿಗಳಿಗೆ ನೀಡಬೇಕು.

ಆಟದ ಮೈದಾನ, ಉದ್ಯಾನವನ, ರಸ್ತೆ, ಚರಂಡಿ, ಬಸ್‍ನಿಲ್ದಾಣ, ತೆರೆದ ಸಾರ್ವಜನಿಕ ಪ್ರದೇಶಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಕಸವನ್ನುಎಸೆಯುವಂತಿಲ್ಲ. ಮನೆಗಳ ಮುಂಭಾಗದಲ್ಲಿ ಹೈನುಗಾರಿಕೆಯತ್ಯಾಜ್ಯವನ್ನು ಸಂಗ್ರಹಗೊಳಿಸುವಂತಿಲ್ಲ.

ಸ್ವಚ್ಫ ಭಾರತಅಭಿಯಾನಯೋಜನೆಯಡಿ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿರುವ ಫಲಾನುಭವಿಗಳು ಕಡ್ಡಾಯವಾಗಿ ಶೌಚಾಲಯಕ್ಕೆ ವಿದ್ಯುತ್ ನೀರಿನ ಸೌಲಭ್ಯ ಶೌಚಾಲಯದ ಒಳಗೆ ನಳ ಅಳವಡಿಸಿಕೊಳ್ಳಬೇಕು. ಮಲತ್ಯಾಜ್ಯವನ್ನು ಒಳಚರಂಡಿಗೆ ಅಥವಾ ಪಿಟ್‍ಗೆ ಹರಿಯುವಂತೆ ಅಳವಡಿಸಿಕೊಳ್ಳಬೇಕು.

ಬಯಲು ಮಲ/ಮೂತ್ರ ವಿಸರ್ಜನೆ ದಂಡನಾರ್ಹ ಅಪರಾಧವಾಗಿರುತ್ತದೆ. ಎಲ್ಲೆಂದರಲ್ಲಿಕಟ್ಟಡದ ಭಗ್ನಾವೇಶವನ್ನು ಎಸೆಯಬಾರದು. ಸಾಕು ಪ್ರಾಣಿಗಳಾದ ನಾಯಿ, ದನ, ಹಸು, ಹಂದಿ ಮತ್ತು ಕುರಿಗಳನ್ನು ಇತ್ಯಾದಿಗಳನ್ನು ರಸ್ತೆಯಲ್ಲಿ ಬಿಡಲಾರದು. ತಪ್ಪಿದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಪುರಸಭೆ ವತಿಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಮಾರಾಟ/ಬಳಕೆ/ದಾಸ್ತಾನು/ ಇತ್ಯಾದಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಸಾರ್ವಜನಿಕರಆರೋಗ್ಯ ಹಾಗೂ ಪಟ್ಟಣದ ನೈರ್ಮಲ್ಯತೆಯ ಹಿತದೃಷ್ಠಿಯಿಂದ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳು  ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: