ಮೈಸೂರು

ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಿ : ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್

ಮೈಸೂರು,ಡಿ.8:- ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಿ  ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಹೇಳಿದರು.

ಶಾರದಾ ವಿಲಾಸ ಕಾನೂನು ಕಾಲೇಜುವತಿಯಿಂದ ಶತಮಾನೋತ್ಸವ ಭವನದಲ್ಲಿಂದು ನಡೆದ ಸಂವಿಧಾನ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಯುವಜನತೆ ದೇಶದ ಭವಿಷ್ಯ. ದೇಶದ ಭವಿಷ್ಯವನ್ನು ರೂಪಿಸತಕ್ಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಮದು ತಿಳಿಸಿದರು. ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ಜೀವಿಗೂ ಕಟ್ಟುಪಾಡುಗಳಿರಬೇಕು. ಸರ್ಕಾರ ತನ್ನ ಕಾರ್ಯಕ್ಷಮತೆ ಮಾಡಲು ಸಮತೋಲವಿರಬೇಕು. ಇಲ್ಲದಿದ್ದಲ್ಲಿ ಅರಾಜಕತೆ ಉಂಟಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸರ್ಕಾರ ಹೇಗಿರಬೇಕು ಎಂಬುದನ್ನು ತಿಳಿಸಿದರು. ಮೂಲಭೂತಹಕ್ಕುಗಳನ್ನು ನೀಡಿದರು. ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಂಡು ಸಂವಿಧಾನ ಆಶೋತ್ತರಗಳಿಗೆ ಕಾರ್ಯನಿರ್ವಹಿಸಬೇಕು. ಕಾಲಾಂತಗಳಲ್ಲಿ ಪ್ರಜೆಗಳಲ್ಲಿ ಕರ್ತವ್ಯದ ಜಾಗೃತಿ ಇಲ್ಲದಂತೆಚ ಕಂಡು ಬಂದಾಗ 42ನೇ ತಿದ್ದುಪಡಿ ತಂದು ಮೂಲಭೂತ ಕರ್ತವ್ಯವನ್ನು ಅಳವಡಿಸಲಾಯಿತು ಎಂದು ವಿವರಿಸಿದರು. ಗ್ರಾಮಾಂತರ ಪ್ರದೇಶಗಳಿಂದ ಬಂದಂತಹ ವಿದ್ಯಾರ್ಥಿಗಳಲ್ಲಿ ಅಳುಕಿರುತ್ತದೆ. ಬೇಸಿಕ್ ಫೌಂಡೇಶನ್ ಶಿಕ್ಷಣ ಅವರಿಗೆ ಲಭಿಸಿರುವುದಿಲ್ಲ. ನಾನೂ ಗ್ರಾಮಾಂತರ ಪ್ರದೇಶದಿಂದ ಬಂದವನು ಎನ್ನುವ ಮೂಲಕ ತಾನು ಬೆಳೆದು ಬಂದ ಹಾದಿ, ಎದುರಿಸಿದ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಉಪನ್ಯಾಸ ವರ್ಗ ಕೂಡ ಮಕ್ಕಳಲ್ಲಿರುವ ಕೊರತೆಯನ್ನು ಗಮನಿಸಬೇಕು. ಹುಟ್ಟುವಾಗ ಏನೂ ತರಲ್ಲ. ಹೋಗುವಾಗ ಏನೂ ಕೊಂಡೊಯ್ಯಲ್ಲ. ಸಾರ್ಥಕ ಬದುಕು ಸಾಧಿಸಲು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಮನುಷ್ಯನಿಗೆ ತಾನೆಲ್ಲವನ್ನೂ ತಿಳಿದಿದ್ದೇನೆ ಎಂಬ ಅಹಂ ಯಾವಾಗ ಆರಂಭವಾಗುತ್ತದೋ ಆಗ ಅವನ ಅವನತಿ ಆರಂಭವಾಗುತ್ತದೆ. ಅನ್ಯಾಯಕ್ಕೊಳಗಾದವರಿಗೆ ಶೋಷಿತರಿಗೆ ಹೃದಯ ಶ್ರೀಮಂತಿಕೆ ತೋರಿಸಬೇಕು. ಜನರ ನೋವಿಗೆ ಧ್ವನಿಯಾಗದಿದ್ದರೆ ಬದುಕಿದ್ದೂ ಸತ್ತಂತೆ. ನಮ್ಮ ಜೀವಿತಾವಧಿ ಸವೆದು ಹೋಗಬೇಕೇ ವಿನಃ ತುಕ್ಕು ಹಿಡಿಯಬಾರದು. ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುರೇಶ್ ಲಕ್ಷ್ಮಣ್ ಕೃಷ್ಣಪ್ಪ ವಂಟಿಗೋಡಿ, ಮಂಡ್ಯದ ಪ್ರಧಾನ ಸತ್ರ ನ್ಯಾಯಾಧೀಶ ಹೆಚ್.ಇ.ಚಿಣ್ಣಪ್ಪ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಗೌರಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: