ದೇಶಪ್ರಮುಖ ಸುದ್ದಿ

ಮುಖೇಶ್ ಅಂಬಾನಿ ಮಗಳ ಮದುವೆ ಜೊತೆ ನಿರಂತರ ಅನ್ನಸೇವೆಗೂ ಚಾಲನೆ!

ಉದಯಪುರ (ಡಿ.8): ಭಾರತದ ನಂ.1 ಸಿರಿವಂತ ಮುಕೇಶ್ ಅಂಬಾನಿ ಮನೆಯಲ್ಲಿ ಮಗಳ ಮದುವೆ ಯ ಸಂಭ್ರಮ. ಉದಯಪುರದ ಅರಮನೆಯಲ್ಲಿ ನಡೆಯುವ ಈ ರಾಯಲ್ ವೆಡ್ಡಿಂಗ್‌ಗೆ ಅದ್ಧೂರಿ ತಯಾರಿ ನಡೆದಿದ್ದು, ಈಗಾಗಲೇ ಮದುವ ಪೂರ್ವ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ.

ಸಿರಿವಂತರ ಮನೆ ಮದುವೆಯಲ್ಲಿ ವಿಶೇಷ ಆಹ್ವಾನಿತರಿಗೆ ಮಾತ್ರ ಎಂಟ್ರಿ ಎಂಬ ಭಾವನೆ ಸಹಜ. ಆದರೆ, ಇದಕ್ಕೆ ಅಪವಾದವೆಂಬಂತೆ ಈ ಸಿರಿವಂತ ದಂಪತಿಗಳು ಸಾವಿರಾರು ಬಡ, ವಿಶೇಷ ಚೇತನರಿಗೂ ಊಟ ಹಾಕುತ್ತಿದ್ದಾರೆ. ಅಲ್ಲದೇ ಸದಾ ಬಡವರ ಹೊಟ್ಟೆ ತುಂಬಿಸುವಂಥ ‘ಅನ್ನದಾನ’ ಯೋಜನೆಗೂ ಮಗಳ ಮದುವೆ ಮೂಲಕವೇ ನಾಂದಿ ಹಾಡುತ್ತಿದೆ ಈ ಶ್ರೀಮಂತ ಕುಟುಂಬ.

ಉದಯಪುರದಲ್ಲಿ ನಡೆಯುತ್ತಿರುವ ಅನ್ನ ಸೇವಾ ಯೋಜನೆಯಲ್ಲಿ 5000 ಮಂದಿಗೆ ಅಂಬಾನಿ ಕುಟುಂಬ ಅನ್ನದಾನ ಮಾಡುತ್ತಿದೆ. ಇದರಲ್ಲಿ ಸಾವಿರಾರು ಮಂದಿ ವಿಶೇಷ ಚೇತನರೂ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ ಖುದ್ದು ಅಂಬಾನಿ ದಂಪತಿಯೇ ಬಡವರಿಗೆ ಊಟ ಬಡಸುತ್ತಿರುವುದು ಮತ್ತೊಂದು ವಿಶೇಷ. ಡಿಸೆಂಬರ್ 12ರಂದು ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮದುವೆ ಉದ್ಯಮಿ ಆನಂದ್ ಪಿರಮಾಳ್ ಅವರೊಂದಿಗೆ ನಡೆಯಲಿದೆ. ಈಗಾಗಲೇ ಈ ಜೋಡಿ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ. (ಎನ್.ಬಿ)

Leave a Reply

comments

Related Articles

error: