ಕರ್ನಾಟಕಪ್ರಮುಖ ಸುದ್ದಿ

ಮಕ್ಕಳ ಬಾಯಿಗೆ ಟೇಪ್‌ ಅಂಟಿಸಿದ ಶಿಕ್ಷಕಿ ಅಮಾನತು

ಗುರುಗ್ರಾಮ (ಡಿ.8): ತರಗತಿಯಲ್ಲಿ ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳ ಬಾಯಿಗೆ ಬೀಗ ಜಡಿಯಲು ಹೊಸ ಮಾರ್ಗ ಕಂಡುಕೊಂಡಿದ್ದ ಶಿಕ್ಷಕಿ ತಾನೆ ಅಮಾನತು ಶಿಕ್ಷೆ ಅನುಭವಿಸುವಂತಾಗಿದೆ.

ಗುರುಗ್ರಾಮ ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರು ಎಲ್‌ಕೆಜಿ ವಿದ್ಯಾರ್ಥಿಗಳನ್ನು ಗದರಿಸಲು ಅವರ ಬಾಯಿಗೆ ಸೆಲ್ಲೊ ಟೇಪ್‌ ಅಂಟಿಸಿದ್ದರು. ಅಕ್ಟೋಬರ್‌ನಲ್ಲಿ ನಡೆದಿದ್ದ ಈ ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿಯನ್ನು ಅಮಾನತು ಮಾಡಿದೆ.

ನಾಲ್ಕು ವರ್ಷದ ಒಬ್ಬ ಬಾಲಕಿ ಮತ್ತೊಬ್ಬ ಬಾಲಕನ ಬಾಯಿಗೆ ಶಿಕ್ಷಕಿ ಟೇಪ್‌ ಅಂಟಿಸಿದ ದೃಶ್ಯವನ್ನು ಶಾಲೆಯಲ್ಲಿ ಯಾರೊ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ವಿಷಯ ತಿಳಿಯುತ್ತಲೇ ವಿದ್ಯಾರ್ಥಿಗಳ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಈ ಇಬ್ಬರು ಮಕ್ಕಳು ವಿಪರೀತ ವಾಚಾಳಿಗಳಾಗಿದ್ದು, ಅವಾಚ್ಯ ಶಬ್ದ ಬಳಸುತ್ತಿದ್ದರು. ಇಡೀ ತರಗತಿಗೆ ತೊಂದರೆ ಕೊಡುತ್ತಿದ್ದರು ಎಂದು ಶಿಕ್ಷಕಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: