ಪ್ರಮುಖ ಸುದ್ದಿಮೈಸೂರು

ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ  ಕಾರಂಜಿ ಕೆರೆಗೆ ಸಚಿವ ಸಾ.ರಾ.ಮಹೇಶ್  ಭೇಟಿ

ಮೈಸೂರು,ಡಿ.10:- ಮೈಸೂರು ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ  ಕಾರಂಜಿ ಕೆರೆಗೆ ನಿನ್ನೆ ಸಚಿವ ಸಾ.ರಾ.ಮಹೇಶ್  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರವಾಸಿಗರ ಸೆಳೆಯುವ ಹಾಗೂ ಕೆರೆಗಳ ಅಭಿವೃದ್ಧಿ ದೃಷ್ಟಿಯಿಂದ ಕೆರೆಗಳ ಪುನಃಶ್ಚೇತನ ಕೆಲಸ ನಡೆಯುತ್ತಿದ್ದು, ಮೈಸೂರಿನ ಲಿಂಗಾಬುದಿ ಕೆರೆ, ಕಾರಂಜಿಕೆರೆ ಹಾಗೂ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಲಿಂಗಾಬುದಿ ಕೆರೆ ಅಭಿವೃದ್ಧಿಗೆ ಮುಡಾದಿಂದ ಹಣ ಬಿಡುಗಡೆ ಮಾಡಲಾಗಿದ. ಕುಕ್ಕರಹಳ್ಳಿ ಕರೆ ಅಭಿವೃದ್ಧಿಗೆ ಈಗಾಗಲೇ ಪರಿಸರ ತಜ್ಞರು, ವಿವಿ ಅಧಿಕಾರಿಗಳ ನೇತೃತ್ವದ ಕಮಿಟಿ ಮಾಡಲಾಗಿದೆ. ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ನಾಲ್ಕು ಕೋಟಿ 20ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಕಾರಂಜಿಕೆರೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ  ಹಣ ಬಿಡುಗಡೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಿಂದ ನೈಸರ್ಗಿಕವಾಗಿ ಬರುವ ನೀರನ್ನು ಕಾರಂಜಿಕೆರೆಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಕಾರಂಜಿಕೆರೆಗೆ ಭೇಟಿ ನೀಡಿ ಸಚಿವ ಸಾರಾ ಮಹೇಶ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: