ಪ್ರಮುಖ ಸುದ್ದಿಮೈಸೂರು

ಖಾಸಗಿ ವೈದ್ಯರ ಕೊಲೆ : ರೋಗಿಗಳಂತೆ ನಟಿಸಿ ಬಂದವರಿಂದ ಕೃತ್ಯ ಶಂಕೆ

ರಾಜ್ಯ(ಮಡಿಕೇರಿ)ಡಿ.10:- ಕುಶಾಲನಗರದಲ್ಲಿ  ಖಾಸಗಿ ವೈದ್ಯರೋರ್ವರನ್ನು  ಮೊನ್ನೆ ತಡ ರಾತ್ರಿ ಕೈ ಕಾಲು ಕಟ್ಟಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಅವರ ನಿವಾಸದಲ್ಲಿ ಕೊಲೆ ಮಾಡಿರುವ ಶಂಕೆಯನ್ನು ವೈದ್ಯರ ಸಂಬಂಧಿಕರು ವ್ಯಕ್ತಪಡಿಸಿದ್ದು, ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲೆಯಾದ ವೈದ್ಯರನ್ನು ದಿಲೀಪ್ ಎಂದು ಗುರುತಿಸಲಾಗಿದ್ದು, ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ಸ್ಥಳಕ್ಕೆ ಬೈಲುಕುಪ್ಪೆ ಪೊಲೀಸರು ಮತ್ತು ಪಿರಿಯಾಪಟ್ಟಣ ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೋಗಿಗಳಂತೆ ನಟಿಸಿ ಆಗಮಿಸಿದ ಹಂತಕರಿಂದ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ನೆಲ, ಗೋಡೆ ಮೇಲೆ ಖಾರದ ಪುಡಿ ಕಂಡುಬಂದಿದೆ. ಎರಡು ಕೈ ಹಿಂದಕ್ಕೆ ತಿರುಗಿಸಿ ದಾರದಿಂದ ಬಿಗಿದು ಕಟ್ಟಲಾಗಿದೆ. ಮುಖಕ್ಕೆ, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಸಾಯಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ  ಮೈಸೂರು ಎಸ್ಪಿ ಅಮಿತ್ ಸಿಂಗ್, ಶ್ವಾನ ದಳ, ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: