ಮೈಸೂರು

ನೋ ಪಾರ್ಕಿಂಗ್ ಸ್ಥಳದಲ್ಲೇ ವಾಹನ ನಿಲುಗಡೆ : ಪೊಲೀಸರ ಯಡವಟ್ಟು ; ಯುವಕನಿಂದ ಫುಲ್ ಕ್ಲಾಸ್

ಮೈಸೂರು,ಡಿ.10:- ಪೊಲೀಸರಿಂದಲೂ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಅಷ್ಟೇ ಅಲ್ಲ. ನೋಪಾರ್ಕಿಂಗ್ ಸ್ಥಳದಲ್ಲಿ ನೋಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗುವ ವಾಹನವನ್ನು ಹೊತ್ತೊಯ್ಯುವ ವಾಹನವೊಂದನ್ನು ಪೊಲೀಸರೇ ನಿಲ್ಲಿಸಿ ನಗೆಪಾಟಲಿಗೆ ಈಡಾಗಿದ್ದಾರಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಯುವಕನೋರ್ವ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾನೆ.

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗುವ ವಾಹನವನ್ನು ಹೊತ್ತೊಯ್ಯುವ ಪೊಲೀಸರ ವಾಹನವನ್ನು ನೋ ಪಾರ್ಕಿಂಗ್ ನಲ್ಲೆ ಪಾರ್ಕಿಂಗ್ ಮಾಡಲಾಗಿದ್ದು, ಸಂಚಾರಿ ಪೊಲೀಸರ ನಡೆಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಮೈಸೂರು ದೇವರಾಜ ಸಂಚಾರಿ ಠಾಣೆ ಎದುರು ರಸ್ತೆಯ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಾಕಿ ಪ್ರಶ್ನೆ ಮಾಡಿದ್ದಾನೆ.  ಸಾರ್ವಜನಿಕರಿಗೊಂದು ನ್ಯಾಯ ಪೊಲೀಸರಿಗೊಂದು ನ್ಯಾಯಾನಾ ಎಂದು ಪ್ರಶ್ನಿಸಿದ್ದು, ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಟೈಗರ್ ವಾಹನದ  ಪೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಮೈಸೂರು ಸಿಟಿ ಟ್ರಾಫಿಕ್ ಪೊಲೀಸ್ ಇದರ ಬಗ್ಗೆ ಯಾವ ರೀತಿ ಕ್ರಮ ಜರುಗಿಸಿ ದಂಡ ವಿಧಿಸುತ್ತಾರೋ, ಅಥವಾ ಶಿಕ್ಷೆಗೆ ಒಳಪಡಿಸುತ್ತಾರೋ ತಿಳಿಯದು ಎಂದು ಬರೆದುಕೊಂಡಿದ್ದಾನೆ.

ಒಟ್ಟಿನಲ್ಲಿ ಸಾರ್ವಜನಿಕರಿಗೆ ಬುದ್ಧಿ ಹೇಳುವ ಪೊಲೀಸರು ಕೂಡ ತಪ್ಪು ಮಾಡುತ್ತಾರಾ ಎಂಬ ಪ್ರಶ್ನೆ ಕೇಳಿ ಬಂದಿದೆ.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: