ಮೈಸೂರು

ಮರೆಯಾಗುತ್ತಿರುವ ಜಾನಪದ ಉಳಿಸಲು ಅಧ್ಯಯನ ಕೇಂದ್ರಗಳು ಸ್ಥಾಪನೆಯಾಗಬೇಕು : ಪ್ರೊ.ರಂಗಪ್ಪ

ಮರೆಯಾಗುತ್ತಿರುವ ಜನಪದ ಸೊಗಡಿಗೆ ಮರುಜೀವ ನೀಡಲು ಜನಪದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮತ್ತು ಮಹಾರಾಜ ಕಾಲೇಜಿನ ಜಾನಪದ ಸಂಘ, ಜಾನಪದ ಅಧ್ಯಯನ ವಿಭಾಗದ ಸಹಯೋಗದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ  ಜಾನಪದ ಬೆಳ್ಳಿ ಸಂಭ್ರಮದ ನೆನಪಿನ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆ.ಎಸ್.ರಂಗಪ್ಪ ಮಾತನಾಡಿದರು.

ಜನಪದ ಸಂಸ್ಕೃತಿ ಹುಟ್ಟಿ ಬೆಳೆದದ್ದೇ ಹಳ್ಳಿಗಳಲ್ಲಿ. ಈಗ ಹಳ್ಳಿಗಳಲ್ಲಿಯೂ ಜನಪದ ಮರೆಯಾಗುತ್ತಿರುವುದು ವಿಷಾದನೀಯ ಎಂದರು. ಜನಪದ ಅಧ್ಯಯನ ಸಂಸ್ಥೆಗಳು ಹಳ್ಳಿಹಳ್ಳಿಗೆ ತೆರಳಿ ವೈಜ್ಞಾನಿಕ ಅಧ್ಯಯನಕ್ಕೆ ಪೂರಕವಾದ ಜನಪದ ಎಳೆಗಳನ್ನು ಸಂಗ್ರಹಿಸಬೇಕು. ಸಂಶೋಧನೆಗಳನ್ನು ಕೈಗೊಂಡು ಜನಪದ ಬೇರುಗಳನ್ನು ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ಬೆಳ್ಳಿ ಸಂಭ್ರಮದ ನೆನಪಿನ ಸಂಪುಟ ಬಿಡುಗಡೆ ಮಾಡಿದರು. ಈ ಸಂದರ್ಭ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ, ಆಡಳಿತಾಧಿಕಾರಿ ಪ್ರೊ.ಎಲ್.ಲಿಂಬ್ಯಾನಾಯಕ್, ಪ್ರೊ.ಸಿ.ಪಿ.ಸುನೀತಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: