ಮೈಸೂರು

ಹುಲಿ ದಾಳಿಗೆ ಎರಡು ಹಸು ಬಲಿ

ಮೈಸೂರು,ಡಿ.10:- ಹೆಚ್.ಡಿ‌.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾದ ಘಟನೆ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ನೇರಳೆ  ಸುಣ್ಣಕಲ್ಲುಮುಂಟ್ಟಿ  ಗ್ರಾಮದಲ್ಲಿ ಎರಡು ಹೆಚ್.ಎಫ್ ಹಸುಗಳು ಹುಲಿ ದಾಳಿಗೆ ಸಾವನ್ನಪಿವೆ.  ನೇರಳೆ ಸುಣ್ಣಕಲ್ಲುಮುಂಟಿ ಗ್ರಾಮದ ಅಣ್ಣಯ್ಯ ಸ್ವಾಮಿ ಎಂಬವರಿಗೆ ಸೇರಿದ ಎರಡು ಹಸುಗಳು ಹುಲಿ ದಾಳಿಗೆ ಬಲಿಯಾಗಿದೆ.  ಹಸುವನ್ನು ನಂಬಿ ಜೀವನ ಸಾಗಿಸುತ್ತಿದ ಅಣ್ಣಯ್ಯ ಸ್ವಾಮಿ ಎಂಬವವರಿಗೆ ಸೇರಿದ ಹಸುಗಳು ಸಾವನ್ನಪ್ಪಿರುವುದು ಮಾಲೀಕನಿಗೆ ಬರಸಿಡಿಲು ಬಡಿದಂತಾಗಿದೆ. ಸುಮಾರು 80ಸಾವಿರ ರೂ. ಬೆಲೆ ಬಾಳುವ ಹಸುಗಳು ಸಾವನ್ನಪ್ಪಿದೆ. ಇತ್ತೀಚಿನ ದಿನಗಳಲ್ಲಿ ಹುಲಿದಾಳಿಗೆ ಹತ್ತಾರು ಹಸುಗಳು ಸಾವನ್ನಪ್ಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆಡೆ ಮಾಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: